ಕಾಲೇಜು ವಿದ್ಯಾರ್ಥಿಯ ಕಿಡ್ನಾಪ್ ! ವಿದ್ಯಾರ್ಥಿಯ ಮೇಲೆ ಹಲ್ಲೆ, ಕೊಲೆ ಬೆದರಿಕೆ ! ಏನಿದು ಕಾಲೇಜು ರೌಡಿಸಂ ! ಏನಿದು ಪ್ರಕರಣ ?
ಶಿವಮೊಗ್ಗ : ಶಿವಮೊಗ್ಗದ ರೌಡಿಸಂ ಒಂದು ಕಾಲದಲ್ಲಿ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು. ಅಂತವರ ಹೆಡೆಮುರಿ ಕಟ್ಟಿ ಜೈಲಿನಲ್ಲಿ ಮುದ್ದೆ ಮುರಿಯಲು ಪೊಲೀಸರು ಕೂರಿಸಿದ್ದಾರೆ, ದೊಡ್ಡ ದೊಡ್ಡ ತಲೆಗಳೇ ಬಾಲಾಮುದರಿಕೊಂಡಿದ್ದರು, ಅಂತವರ ಹೆಸರು ಹೇಳಿಕೊಂಡು ಕಾಲೇಜು ವಿದ್ಯಾರ್ಥಿಗಳು ರೌಡಿಸಂ ಮಾಡಿರುವಂತಹ ಘಟನೆ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
(ವಿದ್ಯಾರ್ಥಿಗಳಾದುದ್ದರಿಂದ ಹೆಸರು ಮತ್ತು ಕೆಲ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುತ್ತಿದೆ )
ಶಿವಮೊಗ್ಗದ ಕಾಲೇಜ್ ಒಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿಯನ್ನು ಕೆಲ ಕಾಲೇಜ್ ವಿದ್ಯಾರ್ಥಿಗಳು ಕಿಡ್ನಾಪ್ ಮಾಡಿ, ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಜನವರಿ 5ರಂದು ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಗುಂಪು ಒಂದು ಕಾಲೇಜಿನಲ್ಲಿ ಗಲಾಟೆ ಮಾಡಿತ್ತು, ಈ ಕಾರಣಕ್ಕೆ ಜನವರಿ 8ರಂದು ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಯನ್ನು ಬಲವಂತವಾಗಿ ಬೈಕ್ ನಲ್ಲಿ ಕೂರಿಸಿಕೊಂಡು, ಕಿಡ್ನಾಪ್ ಮಾಡಿ, ನಿರ್ಜನ ಪ್ರದೇಶದಲ್ಲಿ ಎಳೆದೊಯ್ದು, ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿ, ಕೊಲಬೆದರಿಕೆ ಒಡ್ಡಿದ್ದಾರೆ.
ಇದಲ್ಲದೆ ವಿದ್ಯಾರ್ಥಿಯ ಮೇಲೆ ಯಾವುದು ವಸ್ತುವಿನಿಂದ ಹಲ್ಲೆ ಮಾಡಿ, 1,000 ರೂ ಗಳನ್ನು ಫೋನ್ ಪೆ ಮಾಡಿಸಿಕೊಂಡು, ಪೋಲಿಸ್ ಕಂಪ್ಲೇಂಟ್ ಕೊಟ್ಟರೆ ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಒಡ್ಡಿ, ಬಿಟ್ಟು ಕಳಿಸಿದ್ದಾರೆ.
ಗಾಯಾಳು ವಿದ್ಯಾರ್ಥಿಯನ್ನು ಚಿಕಿತ್ಸೆ ನೀಡಲಾಗುತ್ತಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply