ಏರ್ಪೋರ್ಟ್ ಗೆ ತೆರಳುತಿದ್ದ ಕಾರು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ! ನಾಲ್ವರ ವಿರುದ್ದ ಕೇಸ್ ! ಶಿವಮೊಗ್ಗ ಎಕ್ಸ್ ಪ್ರೆಸ್ ಗೆ ವಿಡಿಯೋ ಲಭ್ಯ.

ಏರ್ಪೋರ್ಟ್ ಗೆ ತೆರಳುತಿದ್ದ ಕಾರು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ! ನಾಲ್ವರ ವಿರುದ್ದ ಕೇಸ್ ! ಶಿವಮೊಗ್ಗ ಎಕ್ಸ್ ಪ್ರೆಸ್ ಗೆ ವಿಡಿಯೋ ಲಭ್ಯ.

ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಕಾರನ್ನು ಅಡಗಟ್ಟಿ, ಹಲ್ಲೆ ಮಾಡಿರುವ ಘಟನೆ, ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಕುಮಾರ್ ಎಂಬುವರು ಏರ್ಪೋರ್ಟ್ ನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು, ಶನಿವಾರ ವಿಮಾನ ನಿಲ್ದಾಣದಿಂದ ಪ್ಯಾಸೆಂಜರ್ ಒಬ್ಬರನ್ನು ಪಿಕ್ ಅಪ್ ಮಾಡಿ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಿಟ್ಟು ವಾಪಸ್ ತೆರುಳುತ್ತಿದ್ದಾಗ ಘಟನೆ ನಡೆದಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ವಿಮಾನ ನಿಲ್ದಾಣಕ್ಕೆ ವಾಪಸ್ ತೆರಳುತ್ತಿದ್ದಾಗ, ಬೈಕ್ ನಲ್ಲಿ ಬಂದ ಇಬ್ಬರೂ ಟ್ಯಾಕ್ಸಿಯನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂಧಿಸಿದ್ದಾರೆ, ಇದೇ ವೇಳೆ ಮತ್ತಿಬ್ಬರು ಬೈಕ್ ನಲ್ಲಿ ಬಂದು, ಶಿವಕುಮಾರ್ ಟ್ಯಾಕ್ಸಿಯನ್ನ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ ಇಂದು ಆರೋಪಿಸಲಾಗಿದೆ.

 ಸ್ಥಳೀಯರು ಜಗಳ ಬಿಡಿಸಿದ ಕಾರಣ, ಶಿವಕುಮಾರ್ ಅವರಿಗೆ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ , ಇನ್ನೂ ಗಾಯಾಳು ಶಿವಕುಮಾರ್ ಮೆಗ್ಗಾನ್ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿದ ನಾಲ್ವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.