ಓತಿಘಟ್ಟದಲ್ಲಿ ಸಂಭ್ರಮದ ಸಂಕ್ರಾಂತಿ ಹಬ್ಬ ಆಚರಣೆ
ಶಿವಮೊಗ್ಗ: ಸಾಂಪ್ರದಾಯಿಕ ಹಬ್ಬ ಆಚರಣೆಗಳನ್ನು ನಿರಂತರವಾಗಿ ಸಂಭ್ರಮಿಸುವ ಜತೆಯಲ್ಲಿ ಆಚಾರ ವಿಚಾರಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ನವಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ಗೋ.ರಮೇಶ್ ಗೌಡ ಹೇಳಿದರು.
ಓತಿ ಘಟ್ಟದಲ್ಲಿ ಗ್ರಾಮದಲ್ಲಿ ನವಕರ್ನಾಟಕ ನಿರ್ಮಾಣ ವೇದಿಕೆ ಹಾಗೂ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಒಕ್ಕೂಟದಿಂದ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರೂ ಒಟ್ಟುಗೂಡಿ ಹಬ್ಬಗಳನ್ನು ಆಚರಿಸುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ
ಸಂಕ್ರಾಂತಿ ಸಂಭ್ರಮ ಪ್ರಯುಕ್ತ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ವೈವಿಧ್ಯಮಯ ಸ್ಪರ್ಧೆಗಳನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ವಿಶೇಷವಾಗಿ ಗೋವುಗಳನ್ನು ಪೂಜಿಸಲಾಯಿತು. ಹಬ್ಬದ ಪ್ರಯುಕ್ತ ಗೋವುಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅತ್ಯಂತ ಸಂಭ್ರಮದಿಂದ ಎಲ್ಲರೂ ಒಟ್ಟುಗೂಡಿ ವಿವಿಧ ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಪ್ರಮುಖವಾಗಿ ಒಕ್ಕೂಟದ ಗೌರವಅಧ್ಯಕ್ಷೆ ಶಾಂತ ಸುರೇಂದ್ರ, ಉಪಾಧ್ಯಕ್ಷ ನಿಂಗರಾಜ್, ದಿನೇಶ್, ಕಾರ್ಯದರ್ಶಿ ದೇವೇಂದ್ರ, ಡಾ. ಪ್ರತಿಮಾ ಡಾಕಪ್ಪ ಗೌಡ, ವಿನೋದ ಕುಮಾರ್, ವೀಣಾ ರಮೇಶ್ ಗೌಡ, ದಿನಕರ್, ಧನಲಕ್ಷ್ಮೀ ವೆಂಕಟೇಶ್, ಸಂತೋಷ, ನಯನ ರಾಜು, ರಾಜೀವಿ ಕೃಷ್ಣಮೂರ್ತಿ, ಗೀತಾ ನಿಂಗೇಗೌಡ, ವಾಣಿ ಮಂಜೆಗೌಡ, ಲಕ್ಷ್ಮಣ, ಕೃಷ್ಣಪ್ಪ, ಗ್ರಾಮಸ್ಥರಾದ ಶೇಖರ್ ಸತ್ಯಣ್ಣ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
Leave a Reply