ಮನೆಯಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ! ಹಸೆಮಣೆ ಏರಬೇಕಾದವಳು ನೇಣಿಗೆ ಶರಣಾಗಿದ್ದೇಕೆ ?
ತೀರ್ಥಹಳ್ಳಿ : ಯುವತಿಯೊಬ್ಬಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಟ್ಲೆಹಕ್ಳು ನಲ್ಲಿ ನಡೆದಿದೆ.
13 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾಳೆ.ಫೆಬ್ರವರಿ 4 ರಂದು ಚೈತ್ರ ಅವರಿಗೆ ಮದುವೆ ನಿಗದಿ ಪಡಿಸಲಾಗಿತ್ತು. ಮಾನಸಿಕ ಸ್ಥಿತಿಯಿಂದ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದು ಶನಿವಾರ ರಾತ್ರಿ ಮದುವೆ ಬೇಡ ಎಂದು ಹೇಳಿದ್ದರಂತೆ. ನಂತರ ರಾತ್ರಿ ನೇಣಿಗೆ ಕೊರಳು ಒಡ್ಡಿದ್ದಾರೆ.
ಎಂ ಕಾಂ ಪದವಿಧರೆ ಆಗಿರುವ ಚೈತ್ರ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ತೀರ್ಥಹಳ್ಳಿಯ ಶವಗಾರದಲ್ಲಿ ಶವ ಇರಿಸಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply