ಡಿವೈಎಸ್ಪಿ ಬಾಲರಾಜ್ ಸಿಐಡಿಗೆ ವರ್ಗಾವಣೆ ; ಸರ್ಕಾರ ಆದೇಶ
ಶಿವಮೊಗ್ಗ : ನಗರದ ಡಿವೈಎಸ್‌ಪಿ ಬಾಲರಾಜ್ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಈ ಹಿಂದೆ ತೀರ್ಥಹಳ್ಳಿ ಯಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಆಗಿದ್ದ ಬಾಲರಾಜ್ ಅದೆಷ್ಟೋ ಕ್ರೈಂ ಪ್ರಕರಣಗಳಿಗೆ ಜೀವ ನೀಡಿ ಆರೋಪಿಗಳಿಗೆ ಜೈಲು ಶಿಕ್ಷೆಯಾಗುವಂತೆ ಮಾಡಿದ್ದರು. ತೀರ್ಥಹಳ್ಳಿಯಲ್ಲಿ ನಕ್ಸಲರ ಹೆಸರಿನಲ್ಲಿ ಬೇರೆ ಗುಂಪೊಂದು ದರೋಡೆ ಮಾಡಿದ್ದನ್ನು ಬಾಲರಾಜ್ ಬಯಲಿಗೆಎಳೆದಿದ್ದರು.
ಇಂಥ ಹತ್ತು ಹಲವು ಕ್ರೈಂಗಳ ನಿಖರ ತನಿಖೆ ನಡೆಸಿ, ಆರೋಪಿಗಳಿಗೆ ಹೆಡೆಮುರಿ ಕಟ್ಟಿದ್ದರು. ಬಳಿಕ ಬಾಲರಾಜ್ ಬಿಜಾಪುರಕ್ಕೆ ವರ್ಗಾವಣೆಯಾಗಿದ್ದರು. ಆರಗ ಜ್ಞಾನೇಂದ್ರ ಗೃಹ ಸಚಿವರಾದಸಂದರ್ಭದಲ್ಲಿ ಬಾಲರಾಜ್ ಅವರನ್ನು ಮತ್ತೆ ಶಿವಮೊಗ್ಗ ನಗರದ ಡಿವೈಎಸ್‌ಪಿಯಾಗಿ ವರ್ಗಾವಣೆ ಮಾಡಿದ್ದರು.
ಈಗ ಡಿವೈಎಸ್‌ಪಿ ಬಾಲರಾಜ್ ಸಿಐಡಿಗೆ ವರ್ಗಾವಣೆಗೊ೦ಡಿದ್ದಾರೆ. ಬಾಲರಾಜ್ ವರ್ಗಾವಣೆಯಿಂದ ತೆರವಾದ ಜಾಗಕ್ಕೆ ಇನ್ನೂ ಯಾರನ್ನೂ ನೇಮಿಸಿಲ್ಲ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply