ಹೋರಿ ಹಬ್ಬದ ಮೆರವಣಿಗೆ ವೇಳೆ ಕಲ್ಲು ಕತ್ತಿಯಿಂದ ಹೊಡೆದಾಟ ! ಇಬ್ಬರಿಗೆ ಗಂಭೀರ ಗಾಯ
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚುಂಚಿನಕೊಪ್ಪ ತಾಂಡಾದಲ್ಲಿ ಹೋರಿ ಹಬ್ಬದ ಮೆರವಣಿಗೆಯ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದು, ಅದು ವಿಕೋಪಕ್ಕೆ ತಿರುಗಿ ಕಲ್ಲು ಕತ್ತಿಯಿಂದ ಮಾರಮಾರಿ ನಡೆದಿರುವ ಘಟನೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮವಾರ ರಾತ್ರಿ 9:00 ಗಂಟೆಯ ವೇಳೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹೋರಿ ಹಬ್ಬದ ಮೆರವಣಿಗೆಯ ಸಂದರ್ಭದಲ್ಲಿ ಗ್ರಾಮದ ಗೂಡ್ಯಾನಾಯ್ಕ ಅವರ ಮನೆ ಮುಂದೆ ಹೋರಿ ಮೆರವಣಿಗೆಯ ಗುಂಪು ಪಟಾಕಿ ಸಿಡಿಸಿತ್ತು.ಇದರಿಂದ ತೀವ್ರ ಗದ್ದಲ ಉಂಟಾಗಿ.ಮನೆಯಲ್ಲಿ ಸಣ್ಣ ಮಕ್ಕಳು ಇದ್ದಾರೆ ಪಟಾಕಿ ಸಿಡಿಸಿ ಗಲಾಟೆ ಮಾಡಬೇಡಿ ಎಂದಿದ್ದಾರೆ.
ಇದೇ ಕಾರಣಕ್ಕೆ ಗೂಡ್ಯಾನಾಯ್ಕನ ಜೊತೆಗೆ ಪತ್ನಿ ಜಯಾಬಾಯಿ, ಪುತ್ರ ಯುವರಾಜ ಹಾಗೂ ಪುತ್ರಿ ಮೇಲೆ ಹಾರೊಗೊಪ್ಪದ ವೀರೇಶ್ ನಾಯ್ಕ, ಗಣೇಶ ನಾಯ್ಕ, ರವಿ ನಾಯ್ಕ, ಚಂದ್ರಾ ನಾಯ್ಕ ಎಂಬವರು ಕಲ್ಲು ಕ೦ದಲಿಯಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಗೂಡ್ಯಾನಾಯ್ಕನ ಹಣೆಗೆ ಕಲ್ಲಿನೇಟು ಬಿದ್ದಿದೆ. ಪುತ್ರ ಯುವರಾಜನಿಗೆ ಕಂದಲಿ ಏಟು ಬಿದ್ದಿದ್ದು, ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply