ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಶಿವರಾಜು ಪಿ ನೇಮಕ
ಶಿವಮೊಗ್ಗ : ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ( ಆಡಳಿತ ) ಶಿವರಾಜ್ ಪಿ ನೇಮಕವಾಗಿದ್ದಾರೆ. ಮೈಸೂರಿನಲ್ಲಿ ( ಎ ಡಿ ಸಿ ) ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಶಿವರಾಜು ಪಿ ಕುವೆಂಪು ವಿಶ್ವವಿದ್ಯಾಲಯದ ಕುಲ ಸಚಿವರಾಗಿ ನೇಮಕಗೊಂಡಿದ್ದಾರೆ.
ಇಲ್ಲಿಯವರೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ( ಸಿ ಇ ಒ ) ಆಗಿದ್ದ ಸುಹೇಲ್ ಲೋಖಂಡೆ ಪ್ರಭಾರಿಯಾಗಿ ಕುವೆಂಪು ವಿಶ್ವವಿದ್ಯಾಲಯದ ಕುಲ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಕುಲ ಸಚಿವರ ಜಾಗಕ್ಕೆ ಶಿವರಾಜು ಪಿ ನೇಮಕವಾಗಿದ್ದು. ಸಿಇಒ ಸುಹೇಲ್ ಲೋಖಂಡೆ ಅವರ ಪ್ರಭಾವಿ ನೇಮಕಾತಿ ಕೊನೆಗೊಂಡಿದೆ.
ಇನ್ನೂ ಶಿವರಾಜು.ಪಿ ಮೈಸೂರಿನಲ್ಲಿ ( ಎಡಿಸಿ ) ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅವರನ್ನು ವರ್ಗಾವಣೆ ಮಾಡಿ ಅವರ ಕಾರ್ಯಸ್ಥಾನದ ಜಾಗವನ್ನ ಕಾಯ್ದಿರಿಸಿ ಆದೇಶಿಸಿತ್ತು. ಆದರೆ ನೆನ್ನೆ ಕುವೆಂಪು ವಿಶ್ವವಿದ್ಯಾನಿಲಯದ ಕುಲ ಸಚಿವರನ್ನಾಗಿ ಸರ್ಕಾರ ನೇಮಕ ಮಾಡಿದೆ. ಶಿವರಾಜು ಪಿ ಎಂ ಎ ಪದವೀಧರರಾಗಿದ್ದು. ಕೆಎಎಸ್ ಶ್ರೇಣಿಯ ಅಧಿಕಾರಿಯಾಗಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply