ನೇಮಕವಾದ 2 ದಿನಕ್ಕೆ ಕುವೆಂಪು ವಿವಿಯ ಕುಲಸಚಿವರ ಬದಲು ! ಅಧಿಕಾರ ಸ್ವೀಕಾರಕ್ಕೂ ಮುನ್ನ ಧಿಡೀರ್ ವರ್ಗಾವಣೆ !
ಶಿವಮೊಗ್ಗ : ಕಳೆದ ಜನವರಿ ಡಿಸೆಂಬರ್ 31 ರಂದು ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲ ಸಚಿವರಾಗಿ ಮೈಸೂರಿನ ಎಡಿಸಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವರಾಜ್ ಪಿ ಅವರನ್ನು ನೇಮಕಗೊಳಿಸುವಂತೆ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿತ್ತು. ನೇಮಕಗೊಳಿಸಿದ ಎರಡೇ ದಿನಕ್ಕೆ, ಅಧಿಕಾರ ಸ್ವೀಕರಿಸುವ ಮುನ್ನವೇ ಕುವೆಂಪು ವಿವಿಯ ಕುಲಸಚಿವರ ಬದಲಾಗಿದೆ.
ಶಿವರಾಜು ಪಿ ಅಧಿಕಾರ ಸ್ವೀಕರಿಸುವ ಮುನ್ನವೇ ಪುನಃ ಆದೇಶವನ್ನು ರಾಜ್ಯ ಸರ್ಕಾರ ಬದಲಿಸಿದೆ. ಈಗ ಆಂತರಿಕ ಬದಲಾವಣೆ ಮಾಡಿ ಯಾದಗಿರಿಯ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ವಿಜಯಕುಮಾರ್ ಹೆಚ್ ಬಿ ಅವರನ್ನ ಕುಲಸಚಿವರನ್ನಾಗಿ ನೇಮಿಸಿ ಆದೇಶಿದೆ. ಈ ಬದಲಾವಣೆಗೆ ಕಾರಣ ಏನೆಂದು ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿಲ್ಲ.
ಇನ್ನು ನೂತನ ಕುಲ ಸಚಿವರಾಗಿ ನೇಮಕಗೊಂಡ ವಿಜಯ್ ಕುಮಾರ್ ಹೆಚ್ ಬಿ , ಯಾವಾಗ ಅಧಿಕಾರ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ, ನೇಮಕಗೊಂಡ ಅಧಿಕಾರಿ ಅಧಿಕಾರ ಸ್ವೀಕರಿಸಲು 8 ರಿಂದ 10 ದಿನಗಳವರೆಗೆ ಕಾಲಾವಕಾಶವಿರಲಿದ್ದು , ಯಾವಾಗ ಅಧಿಕಾರ ಸ್ವೀಕಾರ ಎಂಬುದು ನಿರ್ಧಾರವಾಗಿಲ್ಲ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply