ನಶೆಯಲ್ಲಿದ್ದ ಮೆಡಿಕಲ್ ವಿದ್ಯಾರ್ಥಿಯಿಂದ ಅವಾಂತರ ! ನಶೆಯ ಗುಂಗಲ್ಲಿ ಐದಾರು ಕಡೆ ಅಪಘಾತ ! ಕಾರಿನಿಂದ ಹೊರಗೆಳೆದು ಥಳಿಸಿದ ಸಾರ್ವಜನಿಕರು !

ನಶೆಯಲ್ಲಿದ್ದ ಮೆಡಿಕಲ್ ವಿದ್ಯಾರ್ಥಿಯಿಂದ ಅವಾಂತರ ! ನಶೆಯ ಗುಂಗಲ್ಲಿ ಐದಾರು ಕಡೆ ಅಪಘಾತ ! ಕಾರಿನಿಂದ ಹೊರಗೆಳೆದು ಥಳಿಸಿದ ಸಾರ್ವಜನಿಕರು !

ಶಿವಮೊಗ್ಗ : ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಹೊಳೆ ಹೊನ್ನೂರು ರಸ್ತೆ ಮುಖಾಂತರ ಜಾವಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಅಡ್ಡಾದಿಡ್ಡಿ ಕಾರು ಚಲಾಯಿಸಿ ಐದಾರು ಕಡೆ ಅಪಘಾತ ಮಾಡಿದ್ದಾನೆ. ಗುರುಪುರದ ಶಾಂತಮ್ಮ ಲೇಔಟ್ ಬಳಿ ದಂಪತಿ ಇಬ್ಬರೂ ಬೈಕ್ ನಲ್ಲಿ ಚಲಿಸುತ್ತಿದ್ದಾಗ ಅವರಿಗೂ ಕಾರ್ ಡಿಕ್ಕಿ ಹೊಡೆದಿದೆ. ಇಬ್ಬರೂ ಗಂಭೀರ ಗಾಯವಾಗಿದೆ.

ಇನ್ನೂ ಇದಕ್ಕಿಂತ ಮುಂಚೆ ಅಡ್ಡಾದಿಡ್ಡಿ ಕಾರು ಚಲಾಯಿಸಿ ಐದಾರು ಕಡೆ ಅಪಘಾತ ಮಾಡಿರುವುದು ಕೂಡ ಕಂಡು ಬಂದಿದೆ. ಘಟನೆಯಲ್ಲಿ ಕೆಲವರು ಗಂಭೀರ ಗಾಯಗೊಂಡಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಆ ಮೆಡಿಕಲ್ ವಿದ್ಯಾರ್ಥಿಯ ಕಾರನ್ನು ಹಿಂಬಾಲಿಸಿ ಬಂದಿದ್ದಾರೆ. ಕಾರನ್ನು ತಡೆದು ಕಾರಿನಿಂದ ಹೊರಗೆಳೆದು ಸಾರ್ವಜನಿಕರು ವಿದ್ಯಾರ್ಥಿಯನ್ನು ಥಳಿಸಿದ್ದಾರೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಗಾಯಗೊಂಡಿದ್ದ ಮೆಡಿಕಲ್ ವಿದ್ಯಾರ್ಥಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು ನಂತರ ಅವರ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಈ ಸಂಬಂಧ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಯು ನಶೆಯಲ್ಲಿದ್ದ ಎಂದು ಆರೋಪಿಸಲಾಗಿದೆ. ಮೆಡಿಕಲ್ ವಿದ್ಯಾರ್ಥಿಯು ಗಾಂಜಾ ನಶೆಯಲ್ಲಿದ್ದಾನಾ ? ಅಥವಾ ಮಧ್ಯದ ನಶೆಯಲ್ಲಿದ್ದಾನಾ ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 

 


Leave a Reply

Your email address will not be published.