ಶಿವಮೊಗ್ಗ ಪೊಲೀಸರಿಂದ ಫೂಟ್ ಪೆಟ್ರೋಲಿಂಗ್ ! 100 ಕ್ಕೂ ಹೆಚ್ಚು ಕೇಸ್ ದಾಖಲು ! ಏನಿದು ಫೂಟ್ ಪಟ್ರೋಲಿಂಗ್ ?
ಶಿವಮೊಗ್ಗ : ರಾತ್ರಿ ವೇಳೆಯಲ್ಲಿ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲ್ಲು ಮತ್ತು ನಿಯಂತ್ರಣಕ್ಕೆ ತರಲು ಏರಿಯಾ ಡಾಮಿನೇಷನ್ ನಡೆಸುತ್ತಾ ಇದ್ದರು. ಇದೀಗ ಶಿವಮೊಗ್ಗ ಪೊಲೀಸರು ಏರಿಯಾ ಡೊಮಿನೇಷನ್ ಅನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ಶಿವಮೊಗ್ಗ ಪೊಲೀಸ್ ಇಲಾಖೆ ಏರಿಯ ಡೊಮಿನೇಷನ್ ಜೊತೆಗೆ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಆಯ್ದ ಪ್ರದೇಶಗಳಲ್ಲಿ ಫೂಟ್ ಪಟ್ರೋಲಿಂಗ್ ನಡೆಸಿದ್ದಾರೆ.
ಸಾಮಾನ್ಯವಾಗಿ ಬಂದೋಬಸ್ತ್ನ ಬಗ್ಗೆ ಜನರಲ್ಲಿ ನಂಬಿಕೆ ಹುಟ್ಟಿಸುವ ಹಾಗೂ ಏರಿಯಾಗಳಲ್ಲಿನ ಅಪರಾಧಿ ಚಟುವಟಿಕೆಗಳಿಗೆ ಬಿಸಿ ಮುಟ್ಟಿಸುವ ಸಲುವಾಗಿ ಪೊಲೀಸ್ ಇಲಾಖೆ ಇಂತಹ ಕ್ರಮಗಳನ್ನು ಕೈಗೊಳ್ಳುತ್ತದೆ.
ನಗರದ ಹಲವೆಡೆ ಫೂಟ್ ಪಟ್ರೋಲಿಂಗ್ ನಡೆಸಿದ ಪೊಲೀಸರು ಕಳೆದ ಶನಿವಾರ ರಾತ್ರಿ 52 ಕೇಸ್ಗಳು ಫಿಟ್ ಆಗಿದ್ದವು ಇನ್ನೂ ಭಾನುವಾರ ರಾತ್ರಿ 33 ಕೇಸ್ಗಳನ್ನ ಹಾಕಿದ್ದ ಶಿವಮೊಗ್ಗ ಪೊಲೀಸರು ನಿನ್ನೆ ಸೋಮವಾರ ರಾತ್ರಿ ಬರೋಬ್ಬರಿ 52 ಪಿಟ್ಟಿ ಕೇಸ್ಗಳನ್ನು ಪಬ್ಲಿಕ್ ನ್ಯೂಸೆನ್ಸ್ ಕ್ರಿಯೆಟ್ ಮಾಡಿದವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಸೊರಬ, ಸಾಗರ, ತೀರ್ಥಹಳ್ಳಿ, ಶಿಕಾರಿಪುರ ತಾಲೂಕುಗಳಲ್ಲಿ ಅಪರಾಧಿ ಚಟುವಟಿಕೆಗಳಿಗೆ ಬಿಸಿ ಮುಟ್ಟಿಸುವ ಸಲುವಾಗಿ ಫೂಟ್ ಪೆಟ್ರೋಲಿಂಗ್ ನಡೆಸಿದ್ದು 100 ಕ್ಕೂ ಹೆಚ್ಚು ಕೇಸ್ ದಾಖಲಿಸಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply