ಶಿವಮೊಗ್ಗ : ರಾಗಿಗುಡ್ಡ ಅಂಬೇಡ್ಕ‌ರ್ ವಸತಿ ಶಾಲೆಗೆ ಅರ್ಜಿ ಆಹ್ವಾನ.

ಶಿವಮೊಗ್ಗ : ರಾಗಿಗುಡ್ಡ ಅಂಬೇಡ್ಕ‌ರ್ ವಸತಿ ಶಾಲೆಗೆ ಅರ್ಜಿ ಆಹ್ವಾನ.

ಶಿವಮೊಗ್ಗ : ನಗರದ ರಾಗಿಗುಡ್ಡದ ಬಿ.ಆರ್.ಅಂಬೇಡ್ಕರ್ ಪ.ಜಾತಿ, ವರ್ಗದ ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಯಲ್ಲಿ 2024-25ನೇ ಸಾಲಿಗೆ 5ನೇ ತರಗತಿಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ 30 ವಿದ್ಯಾರ್ಥಿನಿಯರು ಮತ್ತು ಇತರೇ ವರ್ಗದ 10 ವಿದ್ಯಾರ್ಥಿನಿಯರು ಒಟ್ಟು 40 ವಿದ್ಯಾರ್ಥಿನಿಯರಿಗೆ ಮಾತ್ರ 5ನೇ ತರಗತಿಗೆ ಪ್ರವೇಶಾವಕಾಶವಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಲಾಗುವುದು.

ಉತ್ತಮ ಶಿಕ್ಷಣ, ಊಟ, ವಸತಿ ಸೌಕರ್ಯ, ಸಮವಸ್ತ್ರ ಪಠ್ಯ ಪುಸ್ತಕ ಹಾಗೂ ಇತರೆ ಸೌಲಭ್ಯಗಳು ಉಚಿತವಿದೆ. ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರನ್ನು ಮಾತ್ರ ಪ್ರವೇಶಿಸಿಕೊಳ್ಳಲಾಗುವುದು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಪ್ರವೇಶ ಪರೀಕ್ಷೆ ಅರ್ಜಿ ಫಾರಂಗಳನ್ನು ಶಾಲಾ ಕಚೇರಿಯಲ್ಲಿ ಫೆ.9 ರಿಂದ 22ರವರೆಗೆ ಬೆಳಗ್ಗೆ 10.30 ರಿಂದ ಸಂಜೆ 4.30ರವರೆಗೆ ನೀಡಲಾಗುವುದು. 50 ರು. ನಗದು ಪಾವತಿ ಮಾಡಿ ಅರ್ಜಿ ಪಡೆಯಬಹುದು. ಅರ್ಜಿಗಳನ್ನು ಅಂಚೆ ಮೂಲಕ ಪಡೆಯಬಯಸುವವರು ವಿದ್ಯಾರ್ಥಿನಿಯ ಹೆಸರು, ತಂದೆಯ ಹೆಸರು, ಜಾತಿ, ಜನ್ಮ ದಿನಾಂಕ ಹಾಗೂ ವಿಳಾಸ ಈ ಎಲ್ಲಾ ಮಾಹಿತಿಗಳನ್ನು ಸ್ವ-ವಿಳಾಸ, ಅಂಚೆ ಚೀಟಿ ಹೊಂದಿದ ಕವರ್‌ನೊಂದಿಗೆ ಅರ್ಜಿ ಶುಲ್ಕ ಕಳುಹಿಸಿ ಅರ್ಜಿ ಪಡೆಯಬಹುದಾಗಿದೆ.

ದಾಖಲೆ ಪಡೆಯುವ ವಿದ್ಯಾರ್ಥಿನಿಯರಿಗೆ ಏಪ್ರಿಲ್ 30ಕ್ಕೆ 9 ವರ್ಷ 10 ತಿಂಗಳು ಪೂರ್ಣಗೊಂಡಿರಬೇಕು. ಅರ್ಜಿಸಲು ಮಾರ್ಚ್ 22 ಕೊನೆ ದಿನವಾಗಿದೆ. ಪ್ರವೇಶ ಪರೀಕ್ಷೆಯು ಮಾ.24ರಂದು ಬೆಳಗ್ಗೆ 10.30ಕ್ಕೆ ರಾಗಿಗುಡ್ಡದಲ್ಲಿರುವ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.