ಶಿವಮೊಗ್ಗದಲ್ಲಿ ಟ್ರಿಣ್.. ಟ್ರಿಣ್.. ಸೈಕಲ್ ಸದ್ದು ! 30 ಸ್ಟೇಷನ್ ಗಳಲ್ಲಿ 300 ಸೈಕಲ್ ! ನಗರಕ್ಕೆ ಲಗ್ಗೆ ಇಟ್ಟ ಜಿಪಿಎಸ್ ಆಧಾರಿತ ಸೈಕಲ್ ! ಬಳಸುವುದು ಹೇಗೆ ?

ಶಿವಮೊಗ್ಗದಲ್ಲಿ ಟ್ರಿಣ್.. ಟ್ರಿಣ್.. ಸೈಕಲ್ ಸದ್ದು ! 30 ಸ್ಟೇಷನ್ ಗಳಲ್ಲಿ 300 ಸೈಕಲ್ ! ನಗರಕ್ಕೆ ಲಗ್ಗೆ ಇಟ್ಟ ಜಿಪಿಎಸ್ ಆಧಾರಿತ ಸೈಕಲ್ ! ಬಳಸುವುದು ಹೇಗೆ ?

ಶಿವಮೊಗ್ಗ : ಬಹು ನಿರೀಕ್ಷಿತ ಸಾರ್ವಜನಿಕ ಬೈಸಿಕಲ್ ಶೇರ್ (ಪಿಬಿಎಸ್) ವ್ಯವಸ್ಥೆಗೆ ಕೊನೆಗೂ ಚಾಲನೆ ದೊರೆತಿದ್ದು, ನಗರದ ಬೈಸಿಕಲ್ ಉತ್ಸಾಹಿಗಳು ಇದೀಗ ಈ ಆರೋಗ್ಯಕರ, ಪರಿಸರ ಸ್ನೇಹಿ ಮತ್ತು ವೆಚ್ಚ-ಪರಿಣಾಮಕಾರಿ ಸಾರಿಗೆ ವಿಧಾನವನ್ನು ಬಳಸಬಹುದು. ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಸ್‌ಎಸ್‌ಸಿಎಲ್) ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೋಡ್‌ನಲ್ಲಿ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ನಗರದಲ್ಲಿ ಮೊದಲ ಬಾರಿಗೆ ಪಿಬಿಎಸ್ ಅನ್ನು ಪರಿಚಯಿಸಿದೆ.

270 ಪೆಡಲ್‌ ಸೈಕಲ್‌ ಮತ್ತು 30 ಎಲೆಕ್ಟ್ರಾನಿಕ್‌ ಬೈಸಿಕಲ್‌ಗಳು ಪ್ರಸ್ತುತ ಲಭ್ಯ ಇವೆ. ಪ್ರತಿ ಬೈಸಿಕಲ್‌ ಸ್ಟೇಷನ್‌ಗಳಲ್ಲಿ10-12 ಸೈಕಲ್‌ಗಳನ್ನು ಪಾರ್ಕ್ ಮಾಡುವ ವ್ಯವಸ್ಥೆಯೂ ಕಲ್ಪಿಸಲಾಗಿದೆ. ಕಳೆದ ಮೂರು ದಿನದಲ್ಲಿ 50ಕ್ಕೂ ಹೆಚ್ಚು ಜನ ಸದಸ್ಯತ್ವ ಪಡೆದಿದ್ದು, 25 ಸಾವಿರ ಕಿ.ಮೀ.ನಷ್ಟು ಸೈಕಲ್‌ ಸಂಚಾರ ನಡೆದಿದ್ದು, 85 ಸಾವಿರಕ್ಕೂ ಹೆಚ್ಚು ಹಣ ಸಂದಾಯವಾಗಿದೆ.ಸ್ಮಾರ್ಟ್ ಸೈಕಲ್ ಸವಾರಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಆರೋಗ್ಯಯುತ ಜೀವನ ಹಾಗೂ ಪರಿಸರ ಸ್ನೇಹಿ ಸಾರಿಗೆಗೆ ಶಿವಮೊಗ್ಗ ಜನತೆ ಮನಸೋತಿದ್ದಾರೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

 ಬಳಸುವುದು ಹೇಗೆ ?

 ನಗರದ 30 ಕಡೆ ಸೈಕಲ್ ಸ್ಟೇಷನ್ಗಳನ್ನ ಸ್ಥಾಪಿಸಿದ್ದು, ಖಾಸಗಿ ಕಂಪನಿಯೊಂದು ಐದು ವರ್ಷಗಳ ಕಾಲ ಸೈಕಲ್ ನಿರ್ವಹಣೆ ಮಾಡಲಿದೆ, ಸೈಕಲ್ ಸಂಪೂರ್ಣ ತಂತ್ರಜ್ಞಾನ ಆಧಾರಿತವಾಗಿದ್ದು ಜಿಪಿಎಸ್ ಅಳವಡಿಸಲಾಗಿದೆ,ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿ ಹಣ ಸಂದಾಯ ಮಾಡಿದರೆ ಸೈಕಲ್‌ನ ಲಾಕ್‌ ತೆರೆದುಕೊಳ್ಳುತ್ತದೆ. ನಿರ್ದಿಷ್ಟ ವ್ಯಾಪ್ತಿಯೊಳಗೆ ಚಾಲನೆ ಮಾಡಬೇಕು. ಇಲ್ಲದಿದ್ದರೆ ಅದು ತಾನಾಗೇ ಲಾಕ್‌ ಆಗುತ್ತದೆ.

ಸದಸ್ಯತ್ವ ಪಡೆದವರು

 ಸಾಮಾನ್ಯ ಸೈಕಲ್‌: ಆರಂಭದ 30 ನಿಮಿಷ ಉಚಿತ, ನಂತರ 15 ರೂ.

ಎಲೆಕ್ಟ್ರಿಕಲ್‌ ಸೈಕಲ್‌: ಆರಂಭದ 30 ನಿಮಿಷ 20 ರೂ., ನಂತರ 15 ರೂ.

ಸದಸ್ಯತ್ವ ಪಡೆಯವರು

ಭದ್ರತಾ ಶುಲ್ಕ: 300 ರೂ.

ಸಾಮಾನ್ಯ ಸೈಕಲ್‌: ಪ್ರತಿ 30 ನಿಮಿಷಕ್ಕೆ 15 ರೂ.

ಎಲೆಕ್ಟ್ರಿಕಲ್‌ ಸೈಕಲ್‌: ಪ್ರತಿ 30 ನಿಮಿಷಕ್ಕೆ 20 ರೂ.

ಸದಸ್ಯತ್ವಕ್ಕೆ ನಿಗದಿಯಾದ ದರ

33ಸಿಎಲ್‌1000: 365 ದಿನಕ್ಕೆ 1000 ರೂ.

ಎಸ್‌ಎಸ್‌ಸಿಎಲ್‌ 300: 90 ದಿನಕ್ಕೆ 300 ರೂ.

ಎಸ್‌ಎಸ್‌ಸಿಎಲ್‌ 150: 30 ದಿನಕ್ಕೆ 150 ರೂ.

 ಎಲ್ಲೆಲ್ಲಿ ಸೈಕಲ್ ಸ್ಟೇಷನ್ ನಿರ್ಮಾಣ ?

ನಗರದ ಸರ್ಕ್ಯೂಟ್ ಹೌಸ್, ಆಯನೂರು ಗೇಟ್ ಬಸ್ ನಿಲ್ದಾಣ, ಆಲೊಳ ವೃತ್ತ, ಕೇಕ್ ಕೆಫೆ ವೃತ್ತ, ಎನ್.ಟಿ.ರಸ್ತೆ ಕೇಂದ್ರ ನಗರ ಗ್ರಂಥಾಲಯ, ಡಿವಿಎಸ್ ಶಾಲೆ, ಡಿಸಿ ಕಚೇರಿ ಸಂಕೀರ್ಣ, ನೆಹರು ಸ್ಟೇಡಿಯಂ, ಲಕ್ಷ್ಮಿ ಟಾಕೀಸ್ ಅರಳಿ ಕಟ್ಟೆ, ಎಸ್‌ಆರ್‌ಎಸ್ ಶಾಮಿಯಾನ ಮುಂಭಾಗ, ವಿನೋಬನಗರ ಶಿವಾ ಬೇಕರಿ ಮುಂಭಾಗ, ತರಕಾರಿ ಮಾರುಕಟ್ಟೆ ಮುಂಭಾಗ ಸಿಂಡಿಕೇಟ್ ಎಟಿಎಂ. ರಿವರ್‌ಫ್ರಂಟ್ ಪ್ರವೇಶ ದ್ವಾರ, ರಿವರ್‌ಫ್ರೆಂಟ್ ಹೊರಬರುವ ದ್ವಾರ, ಪೊಲೀಸ್ ಚೌಕಿ, ಎನ್‌ಎನ್‌ಸಿಇ, ಮೆಗ್ಗಾನ್ ಆಸ್ಪತ್ರೆ, ರವೀಂದ್ರ ನಗರ ಪಾರ್ಕ್, ರಾಜೀವ್ ಗಾಂಧಿ ಬಡಾವಣೆ ಬಸ್ ನಿಲ್ದಾಣ, ಇಸ್ಮಾಯಿಲ್ ನಗರ, ಗಣಪತಿ ದೇವಸ್ಥಾನ, ಕೃಷಿ ಕಾಲೇಜು, ಎಂಆರ್‌ಎಸ್ (ಸಹ್ಯಾದ್ರಿ ಕಾಲೇಜು), ಜಿಪಂ ಕಚೇರಿ ಮುಂಭಾಗ, ತುಂಗಾ ನದಿ ಗೇಟ್ 1, ಯೋಗ ಭವನ, ಸಿಟಿ ಮಾಲ್ ಗಳಲ್ಲಿ ಬೈಸಿಕಲ್ ಸ್ಟೇಷನ್ ನಿರ್ಮಿಸಲಾಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.