ಶಿವಮೊಗ್ಗದ ಯುವಜನತೆಗೆ ಭಾರತದ ಸಂಸತ್ತಿನಲ್ಲಿ ಮಾತನಾಡಲು ಸುವರ್ಣವಕಾಶ ! ರಾಷ್ಟ್ರೀಯ ಯುವ ಸಂಸತ್ತು-2024

ಶಿವಮೊಗ್ಗದ ಯುವಜನತೆಗೆ ಭಾರತದ ಸಂಸತ್ತಿನಲ್ಲಿ ಮಾತನಾಡಲು ಸುವರ್ಣವಕಾಶ ! ರಾಷ್ಟ್ರೀಯ ಯುವ ಸಂಸತ್ತು-2024  

ಶಿವಮೊಗ್ಗ ಜಿಲ್ಲೆಯ ಯುವಜನರಿಗೆ ಭಾರತ ಸಂಸತ್ತಿನಲ್ಲಿ ಮಾತನಾಡಲು ಇದೊಂದು ಸುವರ್ಣವಕಾಶ ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಆಯೋಜಿಸಿರುವ ರಾಷ್ಟ್ರೀಯ ಯುವ ಸಂಸತ್ತು-2024 ಪ್ರಯುಕ್ತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿದ್ದು ಇದರಲ್ಲಿ ಭಾಗವಹಿಸಲು ಎಲ್ಲಾರಿಗೂ ಇದೊಂದು ಸುವರ್ಣವಕಾಶವಾಗಿದೆ.

ಭಾಷಣ ಸ್ಪರ್ಧೆಯು (i)Making India a global Leader ii) From Atmanirbhar to Viksit Bhart iii) Empowering the future) ಕುರಿತಾದ ವಿಷಯವನ್ನು ಕನ್ನಡ, ಇಂಗ್ಲೀಷ್‌, ಹಿಂದಿ ಭಾಷೆಯಲ್ಲಿ ಮಾತನಾಡಬಹುದಾಗಿದೆ. (ಕನ್ನಡ ಭಾಷೆಯು ರಾಜ್ಯಮಟ್ಟದ ವರೆಗೆ ಮಾತ್ರ ಸೀಮಿತವಾಗಿರುತ್ತದೆ.)ಜಿಲ್ಲಾ ಮಟ್ಟದ ಸ್ಪರ್ಧೆಯು ವರ್ಚುವಲ್‌ ಮುಖಾಂತರ ನಡೆಯುತ್ತದೆ. ವಿಜೇತರಾದ ಇಬ್ಬರು ಅಭ್ಯರ್ಥಿಗಳು ರಾಜ್ಯ ಮಟ್ಟದಲ್ಲಿ ಭಾಗವಹಿಸ ಬಹುದಾಗಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಇಲ್ಲಿ ವಿಜೇತರಾದವರು ರಾಷ್ಟ್ರ ಮಟ್ಟದಲ್ಲಿ ಸಂಸತ್ತಿನಲ್ಲಿ ಮಾತನಾಡಲು ಆಯ್ಕೆಯಾಗುತ್ತಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರವನ್ನು ಮಾತ್ರ ನೀಡಲಾಗುವುದು. ರಾಷ್ಟ್ರ ಮಟ್ಟದಲ್ಲಿ ವಿಜೇತರಾದವರಿಗೆ ಪ್ರಥಮ ಬಹುವಾನ 2,00,000/-,ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ 1,50,000/- ಹಾಗೂ 1,00,000/- ಮತ್ತು ಇಬ್ಬರಿಗೆ ಸಮಾಧಾನಕರ ಬಹುಮಾನವಾಗಿ 50,000/- ರೂಗಳನ್ನು ನೀಡಲಾಗುವುದು. ಭಾಗವಹಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 25 ವರ್ಷವಾಗಿರಬೇಕು. ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಅವಕಾಶ, ಭಾಗವಹಿಸುವ ಅಭ್ಯರ್ಥಿಗಳು ನನ್ನ ಭಾರತ್(MY Bhart) ಪೋರ್ಟ್‌ಲ್‌ನಲ್ಲಿ ತಮ್ಮ ಹೆಸರನ್ನು ರಿಜಿಸ್ಟರ್‌ ಮಾಡಿಸಿಕೊಳ್ಳತಕ್ಕದ್ದು.

ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಕೊನೆ ದಿನಾಂಕ 18.02.2024 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 08182-220883 ಮತ್ತು 9961332968


Leave a Reply

Your email address will not be published.