ಕುವೆಂಪು ವಿಶ್ವ ವಿದ್ಯಾಲಯದ ಯಡವಟ್ಟು ! ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ !
ಶಿವಮೊಗ್ಗ : ಜಿಲ್ಲೆಯ ಶಂಕರ್ ಘಟ್ಟದಲ್ಲಿ ಇರುವ ಕುವೆಂಪು ವಿಶ್ವವಿದ್ಯಾಲಯದಿಂದ ಯಡವಟ್ಟಾಗಿದ್ದು, ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಗಿದೆ.
2021- 2022ನೇ ಏಪ್ರಿಲ್ /ಮೇ ತಿಂಗಳಲ್ಲಿ ಪ್ರಥಮ ಸೆಮಿಸ್ಟರ್ ನ ಫೈನಾನ್ಸಿಯಲ್ ಅಕೌಂಟಿಂಗ್, ಡಿಜಿಟಲ್ ಫ್ಲೋಯೆನ್ಸಿ ಮತ್ತು ಫಂಡಮೆಂಟಲ್ ಆಫ್ ಬಿಜಿನೆಸ್ ಅಕೌಂಟಿಂಗ್ ವಿಷಯಗಳಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು
ಆದರೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡದೆ, ಕುವೆಂಪು ವಿವಿ ಫಲಿತಾಂಶ ನೀಡುವಲ್ಲಿ ತಾಂತ್ರಿಕ ತೊಂದರೆ ಎದುರಾಗಿದೆ ಎಂದು ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯುವಂತೆ ಸೂಚನೆ ನೀಡಿ ಸುತ್ತೋಲೆ ಹೊರಡಿಸಿದೆ.
ಕುವೆಂಪು ವಿವಿ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯುವಂತಾಗಿದೆ, ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಡೆಯುವ ಪರೀಕ್ಷೆ ಬರೆಯುವಂತೆ ವಿವಿ ಸೂಚನೆ ನೀಡಿದೆ. ಪರೀಕ್ಷಾ ಶುಲ್ಕ ಪಾವತಿ ಮಾಡಿರುವವರು ಶುಲ್ಕ ಕಟ್ಟುವಂತಿಲ್ಲ. ಶುಲ್ಕ ಕಟ್ಟದಿರುವವರು ಪರೀಕ್ಷಾ ಶುಲ್ಕ ಪಾವತಿಸಿ ಪರೀಕ್ಷೆ ಬರೆಯುವಂತೆ ಕುವೆಂಪು ವಿಶ್ವ ವಿದ್ಯಾಲಯ ಸೂಚನೆ ನೀಡಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply