ಗಾಡಿಕೊಪ್ಪ ತಾಂಡಾದಲ್ಲಿ 285ನೇ ಸೇವಾಲಾಲ್ ಜಯಂತಿ ಆಚರಣೆ, ಅದ್ದೂರಿ ಮೆರವಣಿಗೆ
ಶಿವಮೊಗ್ಗ : ತಾಲೂಕು ಬಂಜಾರ ಸಂಘ, ತಾಲೂಕು ಮಹಿಳಾ ಬಂಜಾರ ಸಂಘ, ಗಾಡಿಕೊಪ್ಪ ತಾಂಡಾ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಗುರುವಾರ ಗಾಡಿಕೊಪ್ಪ ತಾಂಡದಲ್ಲಿ ಅಯೋಜಿಸಲಾಗಿದ್ದ 285ನೇಯ ಶ್ರೀ ಸೇವಾಲಾಲ್ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು
ಬಂಜಾರ ಸಮುದಾಯದ ಆರಾಧ್ಯ ದೈವ ಸದ್ಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ ಭೋಗ್ ಕಾರ್ಯಕ್ರಮ ಮತ್ತು ಮಹಾರಾಜರ ಬೃಹತ್ ಮೆರವಣಿಗೆಯನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ಇಂದು ತಾಲೂಕಿನ ಗಾಡಿಕೊಪ್ಪ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.
ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ
ಗಾಡಿಕೊಪ್ಪ ತಾಂಡದ ಸೇವಾಲಾಲ್ ಮಹಾರಾಜರ ದೇವಸ್ಥಾನದ ಆವರಣದಲ್ಲಿ ಸಾಲೂರು ಮಠದ ಶ್ರೀ ಸೈನಾ ಭಗತ್ ಅವರ ಸಮ್ಮುಖದಲ್ಲಿ ಭೋಗ್ ಕಾರ್ಯಕ್ರಮ ನಡೆಯಿತು
ಈ ಸಂದರ್ಭದಲ್ಲಿ ಶಿವಮೊಗ್ಗ ತಾಲೂಕು ಬಂಜಾರ ಸಂಘದ ಅಧ್ಯಕ್ಷರಾದ ಶ್ರೀ ಟಿ ನಾನ್ಯಾ ನಾಯ್ಕ್, ಗೌರವಾಧ್ಯಕ್ಷರಾದ ಶ್ರೀ ಕೆ ಶಶಿಕುಮಾರ್, ಗಾಡಿಕೊಪ್ಪ ತಾಂಡದ ನಾಯಕ್ ಹನುಮಂತ ನಾಯ್ಕ್, ತಾಂಡದ ಡಾವ್ ಗೋಪ್ಯಾ ನಾಯ್ಕ್, ಕಾರ್ ಭಾರಿ ಕೃಷ್ಣ ನಾಯ್ಕ್, ತಾಲೂಕು ಮಹಿಳಾ ಬಂಜಾರ ಸಂಘದ ಅಧ್ಯಕ್ಷರಾದ ಶ್ರೀಮತಿ ರಂಜಿತಾ, ಹಾಗೂ ತಾಲೂಕಿನ ವಿವಿಧ ತಾಂಡದ ನಾಯಕ್, ಡಾವ್, ಕಾರ್ ಬಾರಿ ಉಪಸ್ಥಿತರಿದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply