ಮಲೆನಾಡ ಯುವಕರೇ ಎಚ್ಚರ ! ರೀಲ್ಸ್ ಸುಂದರಿಯ ಮೈ ಮಾಟಕ್ಕೆ ಮರುಳಾಗದಿರಿ ! ಮದುವೆಯಾಗಿ ಮೋಸ ಮಾಡುವುದೇ ಈಕೆಯ ಖಯಾಲಿಯಂತೆ ! ಇಲ್ಲಿದೆ ರೀಲ್ಸ್ ಸುಂದರಿಯ ಕಹಾನಿ !
ಶಿವಮೊಗ್ಗ : ಇದು ಮಲೆನಾಡಿನ ಸುಂದರಿಯ ಕಥೆ. ಸುಂದರಿ ಸನ್ನಿಧಿಗೆ ಮಲೆನಾಡಿನ ಹುಡುಗರೇ ಟಾರ್ಗೆಟ್ ಆಗಿದ್ದಾರೆ ಇವಳ ಮೈ ಮಾಟಕ್ಕೆ ಮರುಳಾಗುವ ಯುವಕರನ್ನ ಪ್ರೀತಿಯ ಬುಟ್ಟಿಗೆ ಬಿಳಿಸಿಕೊಂಡು ಹಣಕ್ಕಾಗಿ ಮದುವೆಯಾಗಿ ಮೋಸ ಮಾಡುವುದೇ ಈಕೆಯ ಖಯಾಲಿ ಆಗಿದೆ. ಮದುವೆ ಆಗಿ ಒಂದಷ್ಟು ದಿನ ಸಂಸಾರ ಮಾಡ್ತಾಳೆ ನಂತರ ದುಡ್ಡಿನ ಜೊತೆಗೆ ಪರಾರಿಯಾಗುತ್ತಾಳೆ.
ತನ್ನ ಮೋಹಕ್ಕೆ ಬೀಳುವ ಯುವಕರನ್ನು ಪ್ರೀತಿಯ ಬಲೆಗೆ ಬೀಳಿಸುತ್ತಾಳೆ. ಪ್ರೀತಿಸಿ ಮದುವೆಯಾಗುವ ಈಕೆ ಮದುವೆಯಾದ ಗಂಡನೊಂದಿಗೆ ಸ್ವಲ್ಪ ದಿನ ಸಂಸಾರ ಮಾಡಿ ಸಂಸಾರದಲ್ಲಿ ಚೂರು ಹೊಂದಾಣಿಕೆ ತಪ್ಪಿದರೂ ಬೇರೆಯೊಬ್ಬರೊಂದಿಗೆ ಪರಾರಿಯಾಗುತ್ತಾಳೆ. ಇದೇ ರೀತಿ ಮೋಸ ಹೋದ ಯುವಕನೊಬ್ಬ ಮಲೆನಾಡ ಯುವಕರಿಗೆ ಎಚ್ಚರವಾಗಿರಿ ಎಂಬ ಸಂದೇಶ ನೀಡುತ್ತಿದ್ದಾನೆ.
ಶಿವಮೊಗ್ಗ ನಗರ ಸಂಕೇತ್ ಎಂಬ ಯುವಕ ತನಗೆ ಸನ್ನಿಧಿಯಿಂದ ಮೋಸವಾಗಿದೆ ಎಂದು ಆರೋಪಿಸಿದ್ದಾನೆ. ಮದುವೆಯಾಗಿ ಕೆಲವು ದಿನವೂ ಸರಿಯಾಗಿ ಸಂಸಾರ ಮಾಡಿಲ್ಲ. ಈಗ ಬರೋಬ್ಬರಿ 20 ಲಕ್ಷ ರೂ. ಮೋಸ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಸಂಕೇತ ಹಾಗೂ ಸನ್ನಿಧಿಯ ವಿವಾಹವಾಗಿತ್ತು. ಅಂದರೆ ಒಂದು ವರ್ಷದ ಹಿಂದೆ ಅವರಿಬ್ಬರು ಒಂದಾಗಿದ್ದರು. ಆದರೆ, ಅವರ ಖುಷಿಯ ದಿನಗಳು ಒಂದೆರಡು ತಿಂಗಳಿಗಷ್ಟೇ ಸೀಮಿತವಾಗಿತ್ತು. ಒಂದೆರಡು ತಿಂಗಳು ಸಂಸಾರ ಮಾಡಿ ಕೈ ಕೊಟ್ಟ ಈ ಸುಂದರಿ ನೀನು ಕೀಳು ಜಾತಿಯವನೆಂದು ಆರೋಪ ಮಾಡಿ ದೂರ ಮಾಡಿದ್ದಾಳಂತೆ. ಈಗ ಬೇರೊಬ್ಬ ಹುಡುಗನ ಜತೆ ಓಡಾಡುತ್ತಿದ್ದಾಳಂತೆ.
ಸಂಕೇತ್ನನ್ನು ಮದುವೆಯಾಗುವ ಮುನ್ನವೂ ಕೆಲವು ತಿಂಗಳ ಕಾಲ ಆಕೆ ಪ್ರೀತಿಸಿದ್ದಳು. ಪ್ರೀತಿ ಪ್ರೇಮ ಅಂತ ಅವನ ಬೆನ್ನುಬಿದ್ದಿದ್ದ ಆಕೆ ಸುಮಾರು 20 ಲಕ್ಷ ರೂ.ಯನ್ನು ಪಡೆದಿದ್ದಳಂತೆ. ಕೊನೆಗೆ ಮದುವೆಯೂ ಆಗಿದೆ. ಆದರೆ, ಜಾತಿ ಹೆಸರು ಹೇಳಿ ಜಾರಿಕೊಂಡಿದ್ದಾಳೆ ಎನ್ನುವುದು ಸಂಕೇತ್ ದೂರು.
ಈ ನಡುವೆ, ತನಗೆ ಮೋಸ ಮಾಡಿದ ಸನ್ನಿಧಿ ಬೇರೆ ಹುಡುಗರಿಗೂ ಇದೇ ರೀತಿ ಮೋಸ ಮಾಡಿದ್ದಾಳೆ. ಬೇರೆ ಯುವಕರ ಜತೆಗೂ ಆಕೆಗೆ ಸಂಬಂಧವಿದೆ ಎಂದೆಲ್ಲ ಸಂಕೇತ್ ಆರೋಪ ಮಾಡಿದ್ದಾರೆ. ಸನ್ನಿಧಿಗೆ ಈ ಹಿಂದೆ ಕಡೂರು ಮೂಲದ ಯುವಕನ ಜೊತೆ ಮದುವೆಯಾಗಿದೆ ಎನ್ನುವುದು ಸಂಕೇತ್ ಆರೋಪ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply