ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ ! ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ !
ಶಿವಮೊಗ್ಗ : ಮೂರು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಯುವಕ ಇಂದು ಶವವಾಗಿ ಪತ್ತೆಯಾಗಿದ್ದಾನೆ. ತಾಲೂಕಿನ ಹಾಯ್ ಹೊಳೆ ಗ್ರಾಮದಲ್ಲಿ ತುಂಗಾ ನದಿಗೆ ಕಟ್ಟಲಾದ ಚೆಕ್ ಡ್ಯಾಮ್ ನಲ್ಲಿ ಯುವಕನ ಶವ ಪತ್ತೆಯಾಗಿದೆ.
ಮೆಕಾನಿಕ್ ಕೆಲಸ ಮಾಡಿಕೊಂಡಿದ್ದ ಅಣ್ಣಾನಗರ ನಿವಾಸಿ ಮೊಹಮ್ಮದ್ ರಿಯಾಜ್ (18) ಎಂಬ ಯುವಕ ಮೂರು ದಿನದ ಹಿಂದೆ ಅಂದರೆ ಫೇ 16 ರಂದು ಮಧ್ಯಾಹ್ನ ಊಟ ಮುಗಿಸಿಕೊಂಡು ಬೈಕ್ ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದ ಯುವಕ ವಾಪಸ್ ಆಗಿರಲಿಲ್ಲ.
ಕುಟುಂಬಸ್ಥರು ಹಲವು ಕಡೆ ಹುಡುಕಿದ್ದಾರೆ ಎಲ್ಲೂ ಸಿಗದ ಕಾರಣ ನೆನ್ನೆ ಅವರ ತಮ್ಮ ಸಮೀರ್ ಪಾಶ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ನಂತರ ಯುವಕನ ಬೈಕ್ ಹಾಯ್ ಹೊಳೆ ಗ್ರಾಮದ ತುಂಗಾ ನದಿಗೆ ಕಟ್ಟಲಾದ ಚೆಕ್ ಡ್ಯಾಮ್ ಬಳಿ ಸಿಕ್ಕಿತ್ತು. ಇಂದು ಯುವಕನ ಶವ ಚೆಕ್ ಡ್ಯಾಮ್ ನಲ್ಲಿ ತೇಲಿ ಬಂದಿದೆ, ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply