ನಗರದಲ್ಲಿ ಮತ್ತೊಂದು ಅಗ್ನಿ ಅವಘಡ ! ಕಾರ್ ಶೆಡ್ ಗೆ ಬೆಂಕಿ ! ಸುಟ್ಟು ಕರಕಲಾದ ಸ್ವಿಫ್ಟ್ ಕಾರು !
ಶಿವಮೊಗ್ಗ : ನಗರದ ಶಂಕರ್ ಮಠ ರಸ್ತೆಯಲ್ಲಿರುವ ಪ್ರತಿಷ್ಠಿತ ರಾಹುಲ್ ಹೋಂಡಾ ಶೋರೂಮ್ ಅಗ್ನಿ ಅವಘಡ ಸಂಭವಿಸಿತ್ತು, ಕೋಟ್ಯಂತರ ರೂ ನಷ್ಟವಾಗಿತ್ತು. ಈಗ ನಗರದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ.
ತಾಲೂಕಿನ ಮತ್ತೂರು ಗ್ರಾಮದಲ್ಲಿ ನೆನ್ನೆ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು. ಕಾರ್ ಶೆಡ್ ಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿ ಅಡಿಕೆ ಚೀಲ ತೆಂಗಿನಕಾಯಿಗಳು ಇದು ಎಲ್ಲವೂ ಸುಟ್ಟು ಬಸ್ಮವಾಗಿದೆ.
ಮತ್ತೂರು ಗ್ರಾಮದ ಬಾಬಯ್ಯ ಎಂಬುವರಿಗೆ ಸೇರಿದ ಗೋದಮಿನಲ್ಲಿ ಕಾರ್ ನಿಲ್ಲಿಸಿದ್ದರು. ಅದರ ಜೊತೆ ಅಡಿಕೆ ಚೀಲಗಳು ತೆಂಗಿನಕಾಯಿಗಳು ಎಲ್ಲವೂ ಇದ್ದು ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply