ಚಾಣಾಕ್ಷತನ, ಸಮಯ ಸ್ಪರ‍್ತಿ, ಚುರುಕುತನ, ತಾಳ್ಮೆ ಇವೆಲ್ಲವನ್ನು ಬೇಡನ್ ಪೋವೆಲ್ ರವರಲ್ಲಿ ಕಾಣುತ್ತೇವೆ  : ಶಕುಂತಲಾ ಚಂದ್ರಶೇಖರ್‌

ಚಾಣಾಕ್ಷತನ, ಸಮಯ ಸ್ಪರ‍್ತಿ, ಚುರುಕುತನ, ತಾಳ್ಮೆ ಇವೆಲ್ಲವನ್ನು ಬೇಡನ್ ಪೋವೆಲ್ ರವರಲ್ಲಿ ಕಾಣುತ್ತೇವೆ : ಶಕುಂತಲಾ ಚಂದ್ರಶೇಖರ್‌

ಶಿವಮೊಗ್ಗ : ಜಿಲ್ಲಾ ಸ್ಕೌಟ್ ಭವನ ಶಿವಮೊಗ್ಗದಲ್ಲಿ ಸಂಸ್ಥಾಪಕರಾದ ಬೇಡನ್ ಪೊವೆಲ್ ಹಾಗೂ ಲೇಡಿ ಬೇಡನ್ ಪೊವೆಲ್‌ರವರ ಜನ್ಮದಿನಾಚರಣೆ ಹಾಗೂ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್‌ರವರು ಸ್ಕೌಟ್ಸ್ ಗೈಡ್ಸ್ ಕಬ್ ಬುಲ್ ಬುಲ್ ಗಳಿಗೆ ಜಿಲ್ಲಾಧಿಕಾರಿಯವರ ಸಹಿ ಇರುವ ಪ್ರಮಾಣಪತ್ರವನ್ನು ವಿತರಿಸಿ ಶಿಕ್ಷಣ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರದೆ, ಮಕ್ಕಳ ಸವೋತೋಮುಖ ಬೆಳವಣಿಗೆಗೆ ಸೀಮಿತವಾಗಿರಬೇಕು. ಪುಸ್ತಕದ ಕಲಿಕೆಯಿಂದ ವ್ಯಕ್ತಿ ಪರಿಪರ‍್ಣನಾಗಲು ಸಾಧ್ಯವಿಲ,್ಲ ಜೀವನದ ಪ್ರತಿಯೊಂದು ಕ್ಷಣವನ್ನು ಸದುಪಯೋಗ ಮಾಡಿಕೊಂಡು ನಮ್ಮಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಅಲ್ಲದೆ ಚಾಣಾಕ್ಷತನ, ಸಮಯ ಸ್ಪರ‍್ತಿ, ಚುರುಕುತನ, ತಾಳ್ಮೆ ಇವೆಲ್ಲವನ್ನು ಬೇಡನ್ ಪೋವೆಲ್ ರವರಲ್ಲಿ ಕಾಣುತ್ತೇವೆ ಹಾಗೆ ತಾವು ಸಹ ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ತಿಳಿಸುತ್ತಾ ಮಾತನಾಡಿದರು.

ಜಿಲ್ಲಾ ಸ್ಕೌಟ್ ಆಯುಕ್ತರಾದ ಶ್ರೀ ಕೆ.ಪಿ.ಬಿಂದುಕುಮಾರ ರವರು ಮಾತನಾಡುತ್ತಾ ಬೇಡನ್ ಪಾವೆಲ್ ಹಾಗೂ ಲೇಡಿ ಬೇಡನ್ ಪೊವೆಲ್ ರವರು ಸ್ಕೌಟಿಂಗ್ ಗೈಡಿಂಗನ್ನು ಹುಟ್ಟು ಹಾಕಿ ಅವರು ದೇಶಾದ್ಯಂತ ರ‍್ಯಟನ ಮಾಡಿ ಶ್ರಮಪಟ್ಟು ಈ ಚಳುವಳಿಯನ್ನು ಬೆಳೆಸಿರುತ್ತಾರೆ ಅಂದಿನಿಂದ ಇಂದಿನವರೆಗೆ ಈ ಚಳುವಳಿಯು ಪ್ರಗತಿದತ್ತ ಸಾಗಿದೆ ಅಲ್ಲದೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಲೆ ಇದೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲಿ ಎಂದು ಆಶಿಸುತ್ತಾ ಜೀವನದಲ್ಲಿ ಕಷ್ಟುಪಟ್ಟು ಉನ್ನತ ಮಟ್ಟಕ್ಕೇರಿದ ಮಹನೀಯರ ಆರ‍್ಶ, ಗುಣಗಳನ್ನು ಅನುಸರಿಸಬೇಕು ಎಂದು ನುಡಿದರು. ಸೇರಿದಂತಹ ಮಕ್ಕಳಿಗೆ ಮುಂದಿನ ಹಂತವಾದ ರಾಜ್ಯಪುರಸ್ಕಾರಕ್ಕೆ ತಯಾರಿ ನಡೆಸಿ ತಾವೆಲ್ಲರೂ ರಾಜ್ಯಪುರಸ್ಕಾರ ಪಡೆಯಬೆಕೆಂದು ತಿಳಿಸುತ್ತಾ, ವರ‍್ಷಿಕ ಪರೀಕ್ಷೆಗಳು ಹತ್ತಿರ ಬಂದಿದ್ದರಿಂದ ಚೆನ್ನಾಗಿ ಪರೀಕ್ಷೆಯನ್ನು ಎದುರಿಸುವಂತೆ ತಿಳಿಸಿದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಸೇರಲು ಫೋಟೋ ಮೇಲೆ ಕ್ಲಿಕ್ ಮಾಡಿ 

ಸಮಾರಂಭದ ಪ್ರಾಸ್ಥಾವಿಕವಾಗಿ ಸಂಸ್ಥಾಪಕರ ದಿನಾಚರಣೆ ಹಾಗೂ ಜಿಲ್ಲಾ ಪುರಸ್ಕಾರದ ಪ್ರಶಸ್ತಿ ಪ್ರಧಾನ ಮಾಡುವ ವಿಷಯವಾಗಿ ಶಿವಮೊಗ್ಗ ಸ್ಥಳೀಯ ಸಂಸ್ಥೆಯ ಕರ‍್ಯರ‍್ಶಿಯವರಾದ ಶ್ರೀ ರಾಜೇಶ ಅವಲಕ್ಕಿರವರು ಸವಿಸ್ತಾರವಾಗಿ ತಿಳಿಸಿದರು. ಸ್ವಾಗತವನ್ನು ಜಿಲ್ಲಾ ಕರ‍್ಯರ‍್ಶಿ ಹೆಚ್.ಪರಮೇಶ್ವರ ನೇರವೇರಿಸಿದರು, ವಂದನೆಯನ್ನು ಸ್ಥಾನಿಕ ಆಯುಕ್ತರಾದ ಕೆ.ರವಿರವರು ನೇರವೇರಿಸಿದರು ನಿರೂಪಣೆಯನ್ನು ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ್ ರವರು ನೇರವೇರಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕಿನ ಹಿರಿಯ ಒಬ್ಬ ಸ್ಕೌಟರ್, ಒಬ್ಬ ಗೈಡರ್‌ಗಳಿಗೆ ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಜಿಲ್ಲಾ ಖಜಾಂಚಿ ಚೂಡಾಮಣಿ ಇ ಪವಾರ, ಜಿಲ್ಲಾ ಸಹಕರ‍್ಯರ‍್ಶಿ ವೈ.ಆರ್.ವೀರೇಶಪ್ಪ, ಸರ‍್ವಜನಿಕ ಸಂರ‍್ಕಾಧಿಕಾರಿ ವಿಜಯಕುಮಾರ ರವರು, ಎಲ್.ಎ.ಕರ‍್ಯರ‍್ಶಿಗಳಾದ ಎ.ಎಸ್.ಮಂಜುನಾಥ, ಆರ್.ಟಿ.ಶೇಖರಪ್ಪ, ನಿಕ್ಸನ್ ಗೊನ್ಸಾಲ್ವಿಸ್, ಹರೀಶ ಎ., ವಿನಯ ಹೆಗಡೆ, ರಾಮಚಂದ್ರಪ್ಪ ಸ್ಕೌರ‍್ಸ್ ಗೈರ‍್ಸ್ಗಳು ಹಾಗೂ ಒಟ್ಟು ೩೦೦ ಕಬ್, ಬುಲ್‌ಬುಲ್, ಸ್ಕೌಟ್ಸ್, ಗೈಡ್ಸ್ ಗಳು ಹಾಜರಿದ್ದರು.


Leave a Reply

Your email address will not be published.