ದರೋಡೆಗೆ ಹೊಂಚು ಹಾಕಿ ನಿಂತಿದ್ದ ಗ್ಯಾಂಗ್ ಮೇಲೆ ಪೊಲೀಸರ ದಾಳಿ ! ಪುರದಾಳು ರಸ್ತೆಯಲ್ಲಿ  ಖಾರದಪುಡಿ, ಮಚ್ಚು ಮಾರಕಾಸ್ತ್ರಗಳ ಸಮೇತ ಖಾಕಿ ಬಲೆಗೆ ಬಿದ್ದ ಗ್ಯಾಂಗ್ !

ದರೋಡೆಗೆ ಹೊಂಚು ಹಾಕಿ ನಿಂತಿದ್ದ ಗ್ಯಾಂಗ್ ಮೇಲೆ ಪೊಲೀಸರ ದಾಳಿ ! ಪುರದಾಳು ರಸ್ತೆಯಲ್ಲಿ ಖಾರದಪುಡಿ, ಮಚ್ಚು ಮಾರಕಾಸ್ತ್ರಗಳ ಸಮೇತ ಖಾಕಿ ಬಲೆಗೆ ಬಿದ್ದ ಗ್ಯಾಂಗ್ !

ಶಿವಮೊಗ್ಗ : ನಗರದ ಸಾಗರ ರಸ್ತೆಯ ಪುರದಾಳಿಗೆ ಹೋಗುವ ದಾರಿಯಲ್ಲಿ ರಾತ್ರಿ ವೇಳೆ ಖಾರದಪುಡಿ,ಮಚ್ಚುಚಾಕು ಮಾರಕಸ್ತ್ರಗಳ ಸಮೇತ ದರೋಡೆಗೆ ಹೊಂಚು ಹಾಕಿ ನಿಂತಿದ್ದ ಡಕಾಯಿತರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಪುರದಾಳು ರಸ್ತೆಯಲ್ಲಿ ಹೋಗುವ ವಾಹನಗಳನ್ನು ಅಡ್ಡಗಟ್ಟಿ ಐವರು ಯುವಕರು ದರೋಡೆಗೆ ಸಂಚು ರೂಪಿಸಿದ್ದಾರೆ ಎಂದು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಡಕಾಯಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಸೇರಲು ಫೋಟೋ ಮೇಲೆ ಕ್ಲಿಕ್ ಮಾಡಿ 

ತಡರಾತ್ರಿ 11:30 ಸುಮಾರಿಗೆ ದರೋಡೆಗೆ ಸಂಚು ರೂಪಿಸಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ನಡೆಸಿದ್ದು.ಶಿಕಾರಿಪುರದ ಮೊಹಮ್ಮದ್‌ ಮುಸೇಬ್‌ (22) ಮತ್ತು ಶಿವಮೊಗ್ಗದ ತೌಸಿಫ್‌ (22) ಎಂಬುವವರನ್ನು ಪೊಲೀಸರು ಬಂದಿದ್ದಾರೆ. ಬಂಧಿತರಿಂದ ಖಾರದಪುಡಿ,ಮಚ್ಚು, ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಿಎಸ್‌ಐ ನಾಗರಾಜ್‌, ಸಿಬ್ಬಂದಿ ನಾಗಪ್ಪ ಅಡಿವೆಪ್ಪನವರ್‌, ಹರೀಶ್‌ನಾಯ್ಕ, ಹರೀಶ್‌ ದಾಳಿಯಲ್ಲಿ ಭಾಗವಹಿಸಿದ್ದರು. ಇನ್ನು ಗ್ಯಾಂಗ್ ನಲ್ಲಿದ್ದ ಮೂವರು ಯುವಕರು ಪರಾರಿಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.