ವಿದ್ಯಾರ್ಥಿನಿಯ ಮೊಬೈಲ್ ಕಸಿದುಕೊಂಡು ಹೋದ ಅಪರಿಚಿತ ! ಯುವತಿಯರಿಗೆ,ಮಹಿಳೆಯರಿಗೆ ಅಶ್ಲೀಲ ಮೆಸೇಜ್ ! ಕುಂಸಿ ಠಾಣೆಯಲ್ಲಿ ಕೇಸ್ ! ಏನಿದು ಪ್ರಕರಣ ?
ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಗ್ರಾಮವೊಂದರ ಕಾಲೇಜು ವಿದ್ಯಾರ್ಥಿನಿ ರಸ್ತೆಯಲ್ಲಿ ನಡೆದು ಬರುತ್ತಿರುವಾಗ ಮೊಬೈಲ್ ಕಸಿದುಕೊಂಡು ಹೋಗಿದ್ದ ಅಪರಿಚಿತನೊಬ್ಬ ಮೊಬೈಲ್ ನಲ್ಲಿದ್ದ ನಂಬರ್ ಗಳಿಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಘಟನೆ ಕುಂಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಡಿಸೆಂಬರ್ 29 ರಂದು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ. ನಂತರ ಮೊಬೈಲ್ ನಲ್ಲಿದ್ದ ಸ್ನೇಹಿತರಿಗೆ, ಯುವತಿಯರಿಗೆ, ಮಹಿಳೆಯರಿಗೆ ಮತ್ತು ಕುಟುಂಬದವರಿಗೆ ಅವಹೇಳನ ಮತ್ತು ಅಶ್ಲೀಲ ಮೆಸೇಜ್ ಕಳಿಹಿಸುತ್ತಿದ್ದ.
ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಸೇರಲು ಫೋಟೋ ಮೇಲೆ ಕ್ಲಿಕ್ ಮಾಡಿ
ಅದಲ್ಲದೆ ಕೆಲ ಸ್ನೇಹಿತರಿಗೆ ಕುಟುಂಬಸ್ಥರಿಗೆ ಅವಹೇಳನ ಕರೆಗಳನ್ನು ಮಾಡಿ ತೊಂದರೆ ನೀಡುತ್ತಿದ್ದ. ನಂತರ ಎಚ್ಚೆತ್ತ ವಿದ್ಯಾರ್ಥಿನಿ ನಂಬರ್ ಅನ್ನು ಬ್ಲಾಕ್ ಮಾಡಿಸಿದ್ದಳು.
ನಂತರ ವಿದ್ಯಾರ್ಥಿನಿಯ ಕುಟುಂಬಸ್ಥರಿಗೆ, ಸ್ನೇಹಿತರಿಗೆ ಅವಹೇಳನ ಮೆಸೇಜ್ ಮತ್ತು ಕರೆಗಳನ್ನು ಮಾಡುತ್ತಿದ್ದ, ಬ್ಲಾಕ್ ಮಾಡಿದ ನಂತರವೂ ಮೆಸೇಜ್ ಕರೆಗಳು ಬರುತ್ತಿದ್ದ ಕಾರಣ, ವಿದ್ಯಾರ್ಥಿನಿ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಮೊಬೈಲ್ ಕಳ್ಳತನ ಮತ್ತು ನಂಬರ್ ದುರ್ಬಳಕೆ ಮಾಡಿಕೊಂಡು ಅಶ್ಲೀಲ ಮೆಸೇಜ್ ಕಳುಹಿಸುತ್ತಿರುವ ಹಿನ್ನೆಲೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply