ಸೂಡ ನೂತನ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಅಧಿಕಾರ ಸ್ವೀಕಾರ.
ಶಿವಮೊಗ್ಗ : ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಹೆಚ್.ಎಸ್. ಸುಂದರೇಶ್ ಅವರು ಇಂದು ಅಧಿಕಾರ ವಹಿಸಿಕೊಂಡರು.
ಇದಕ್ಕೂ ಮುನ್ನ ಎಂಆರ್ಎಸ್ ವೃತ್ತದಲ್ಲಿ ಅದ್ಧೂರಿ ಸ್ವಾಗತ ನೀಡಿ, ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಬೈಕ್ ರ್ಯಾಲಿ ಮೂಲಕ ಸೂಡಾ ಕಚೇರಿವರೆಗೆ ಮೆರವಣಿಗೆಯಲ್ಲಿ ಕರೆ ತಂದರು.
ಸೂಡಾ ಕಚೇರಿ ಮುಂದೆ ಪಟಾಕಿ ಸಿಡಿಸಿ ಘೋಷಣೆ ಕೂಗಿ ಸಂಭ್ರಮಿಸಿದರು. ಸೂಡಾ ಕಚೇರಿಯಲ್ಲಿ ಅಧಿಕೃತವಾಗಿ ಆಯುಕ್ತರಿಂದ ಅಧಿ ಕಾರ ಸ್ವೀಕರಿಸಿದ ಸುಂದರೇಶ್ ಅವರು, ಪಕ್ಷ ನನಗೆ ಸ್ಥಾನ ಮಾನ ನೀಡಿ ಗೌರವಿಸಿದೆ. ಪಕ್ಷದ ವರ್ಚಸ್ಸಿಗೆ ಚ್ಯುತಿ ಬರದ ರೀತಿಯಲ್ಲಿ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸುವುದಾಗಿ ಸಭೆಯಲ್ಲಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಲ್ಕಿಶ್ ಬಾನು, ರಾಮೇಗೌಡ, ಸೈಯದ್ ವಾಹಿದ್ ಅಡ್ಡು, ವಿಜಯಲಕ್ಷ್ಮಿ ಪಾಟೀಲ್, ಚಂದ್ರಭೂಪಾಲ್, ಇಕ್ಕೇರಿ ರಮೇಶ್, ವೈ.ಬಿ. ಚಂದ್ರಕಾಂತ್, ವಿಜಯಕುಮಾರ್, ದೇವಿ ಕುಮಾರ್, ಯಮುನಾ ರಂಗೇಗೌಡ, ಇಸ್ಮಾಯಿಲ್ ಖಾನ್, ಮತ್ತಿತರರು ಇದ್ದರು.
ನೂರಾರು ಅಭಿಮಾನಿಗಳು, ಮುಖಂಡರು ಬೆಂಬಲಿಗರು ಶುಭ ಹಾರೈಸಿದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply