BREAKING NEWS : ಶಿವಮೊಗ್ಗದಲ್ಲಿ ಭರ್ಚಿಯಿಂದ ವ್ಯಕ್ತಿಯೊಬ್ಬನ ಮೇಲೆ ಕೊಲೆಗೆ ಯತ್ನ ! ನಗರದ ಹೃದಯ ಭಾಗದಲ್ಲಿ ಇಂತಹ ಘಟನೆ ನೋಡಿ ಬೆಚ್ಚಿಬಿದ್ದ ಸ್ಥಳೀಯರು !

BREAKING NEWS : ಶಿವಮೊಗ್ಗದಲ್ಲಿ ಭರ್ಚಿಯಿಂದ ವ್ಯಕ್ತಿಯೊಬ್ಬನ ಮೇಲೆ ಕೊಲೆಗೆ ಯತ್ನ ! ನಗರದ ಹೃದಯ ಭಾಗದಲ್ಲಿ ಇಂತಹ ಘಟನೆ ನೋಡಿ ಬೆಚ್ಚಿಬಿದ್ದ ಸ್ಥಳೀಯರು !

ಶಿವಮೊಗ್ಗ : ನಗರದಲ್ಲಿ ಹಾಡು ಹಗಲೇ ವ್ಯಕ್ತಿಯೊಬ್ಬನ ಮೇಲೆ ಭರ್ಜಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದ ಬಿ ಹೆಚ್ ರಸ್ತೆಯ ರಾಯಲ್ ಆರ್ಕಿಡ್ ಹೋಟೆಲ್ ಹಿಂಭಾಗ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ.

ಹಾಡು ಹಗಲೇ ನಗರದ ಹೃದಯ ಭಾಗದಲ್ಲಿ ಪೊಲೀಸರು ಮತ್ತು ಕಾನೂನಿನ ಭಯವಿಲ್ಲದೇ ಭರ್ಚಿಯಿಂದ ವ್ಯಕ್ತಿಯೊಬ್ಬನನ್ನು ಕೊಲೆಗೆ ಯತ್ನಿಸಿರುವ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಸೇರಲು ಫೋಟೋ ಮೇಲೆ ಕ್ಲಿಕ್ ಮಾಡಿ 

ನಗರದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನ ಮೇಲೆ ಕೊಲೆಗೆ ಯತ್ನ ನಡೆದಿದೆ. ಅಪರಿಚಿತ ವ್ಯಕ್ತಿಯು ಏಕಾಏಕಿ ವ್ಯಕ್ತಿಯೊಬ್ಬನಿಗೆ ಭರ್ಚಿಯಿಂದ ಇರಿದು ಎಸ್ಕೇಪ್ ಆಗಿದ್ದಾನೆ. ಹೀಗೆ ಯಾವುದೇ ಭಯವಿಲ್ಲದೇ ಭರ್ಚಿಯಿಂದ ವ್ಯಕ್ತಿಯೊಬ್ಬನನ್ನು ಕೊಲೆಗೆ ಯತ್ನಿಸಿರುವ ಘಟನೆಯಿಂದ ನಗರದ ಜನರು ಬೆಚ್ಚಿಬಿದ್ದಿದ್ದಾರೆ.

ಜಾಹಿರಾತು :

ಬೈಕ್ ನಲ್ಲಿ ಬಂದ ಇಬ್ಬರೂ ಅಪರಿಚಿತರಿಂದ ಕಾರ್ತಿಕ್ (48) ವ್ಯಕ್ತಿಯ ಮೇಲೆ ಏಕಾಏಕಿ ಭರ್ಜಿಯಿಂದ ದಾಳಿಯಾಗಿದೆ, ಕಾರ್ತಿಕ್ ಎನ್ನುವ ವ್ಯಕ್ತಿಯು ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಈ ದಾಳಿಯಾಗಿದೆ, ಈ ವೇಳೆ ಕಾರ್ತಿಕ್ ಭ lರ್ಜಿ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಆದರೆ ಬರ್ಜಿ ಆತನ ಕೈ ಭಾಗಕ್ಕೆ ತಗುಲಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಕೂಡಲೇ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸರಿಸುಮಾರು ಮಧ್ಯಾಹ್ನ 12:30 ರ ಆಸು ಪಾಸಿನಲ್ಲಿ ಈ ಘಟನೆ ನಡೆದಿದೆ

ಈ ಘಟನೆ ನೋಡಿದ ಸ್ಥಳೀಯರು ಕೂಡಲೇ ದೊಡ್ಡಪೇಟೆ ಪೊಲೀಸ್ ಠಾಣೆಗೆ ಮಾಹಿತಿ ಕೊಟ್ಟಿದ್ದಾರೆ. ಭರ್ಜಿ ಇರಿತದಿಂದ ತೀವ್ರ ರಕ್ತಸ್ರಾವಾಗಿದ್ದ ಕಾರ್ತಿಕ್ ನನ್ನು ಕೂಡಲೇ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಪ್ರಕರಣದ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಕೊಲೆ ಮಾಡಲು ಯತ್ನಿಸಿದವರು ಯಾರು ? ಭರ್ಜಿಯಿಂದ ದಾಳಿ ನಡೆಸಿದ್ದೇಕೆ ? ಇವೆಲ್ಲವೂ ನಿಗೂಢವಾಗಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಆರೋಪಿಗಳು ಸಿಕ್ಕ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.