ಇ-ಶ್ರಮ್ ಪೋರ್ಟಲ್ ಅಡಿ ರೂ.2 ಲಕ್ಷಗಳ ಅಪಘಾತ ಪರಿಹಾರಕ್ಕೆ ಅರ್ಜಿ !
ಶಿವಮೊಗ್ಗ : ಇ-ಶ್ರಮ ಪೋರ್ಟಲ್ ಮೂಲಕ ನೊಂದಣಿಯಾದ ಅಸಂಘಟಿತ ಕಾರ್ಮಿಕ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(ಪಿಎಂಎಸ್‍ಬಿವೈ) ಅಡಿ ರೂ.2 ಲಕ್ಷಗಳ ಅಪಘಾತ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮಾ.31 ಅಂತಿಮ ದಿನವಾಗಿದೆ.
ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ(ಎನ್‍ಡಿಯುಡಬ್ಲ್ಯು) ಕ್ರೋಢೀಕರಿಸುವ ಉದ್ದೇಶದಿಂದ 379 ವರ್ಗಗಳ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್ ಮೂಲಕ ದಿ: 26-08-2021 ರಿಮದ ನೋಂದಾಯಿಸಲಾಗುತ್ತಿದೆ.
2022 ರ ಮಾರ್ಚ್ 31 ರವರೆಗೆ ನೋಂದಣಿಯಾದ ಮತ್ತು 2022 ರ ಮಾರ್ಚ್ 31 ರೊಳಗೆ ಅಪಘಾತಗೊಂಡು ಮರಣ ಹೊಂದಿದ/ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ, ಅಸಂಘಟಿತ ಕಾರ್ಮಿಕರು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ಅಪಘಾತ ಪರಿಹಾರ ಪಡೆಯಲು ಕಾರ್ಮಿಕ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬಹುದು. ಅಪಘಾತಕ್ಕೀಡಾದ ಫಲಾನುಭವಿಗಳಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮಾ.31 ಅಂತಿಮ ದಿನವಾಗಿರುತ್ತದೆ.
ಶಾಶ್ವತ ದುರ್ಬಲತೆ ಅಥವಾ ಭಾಗಶಃ ಅಂಗ ವೈಕಲ್ಯತೆಗೆ ಒಳಗಾದಲ್ಲಿ, ಅಂಗವೈಕಲ್ಯ ಪ್ರಮಾಣಪತ್ರ ಅಥವಾ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ನೀಡಲಾದ ಅಂಗವೈಕಲ್ಯ ಗುರುತಿನ ಚೀಟಿಯೊಂದಿಗೆ ಅರ್ಜಿ ಸಲ್ಲಿಸಬಹುದು.
ಫಲಾನುಭವಿ ಆಧಾರ್ ಸಂಖ್ಯೆ, ಯುಎಎನ್ ಕಾರ್ಡ್(ಇ-ಶ್ರಮ್) ಸಂಖ್ಯೆ, ಮರಣ ಪ್ರಮಾಣ ಪತ್ರ, ಮರಣಕ್ಕೆ ಕಾರಣದ ವೈದ್ಯಕೀಯ ಪ್ರಮಾಣ ಪತ್ರ, ಎಫ್‍ಐಆರ್, ಪಂಚನಾಮ, ಇತರೆ ಸೂಕ್ತ ದಾಖಲಾತಿಗಳನ್ನು ಕಾರ್ಮಿಕ ಅಧಿಕಾರಿಗಳ ಕಚೇರಿ ಶಿವಮೊಗ್ಗ ಉಪ ವಿಭಾಗ, ಶಿವಮೊಗ್ಗ ಇಲ್ಲಿ ನೀಡಿ ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply