ಬಿಜೆಪಿ ನಾಯಕರ ಮನವೊಲಿಕೆಗೆ ಈಶ್ವರಪ್ಪ ಡೋಂಟ್ ಕೇರ್ ! ಈಶ್ವರಪ್ಪ ಸಂಧಾನ ಮತ್ತೆ ವಿಫಲ ! ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಹೋದ ಬಿಜೆಪಿ ನಾಯಕರು !
ಶಿವಮೊಗ್ಗ : ಪುತ್ರನಿಗೆ ತಪ್ಪಿದ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನಿಂದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಬಂಡಾಯ ಬಾವುಟ ಹಾರಿಸಿದ್ದು, ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರಗೆ ಸೋಲಿನ ಭೀತಿ ಎದುರಾಗಿದ್ದು, ಬಿಜೆಪಿ ನಾಯಕರು ಅವರ ಬಂಡಾಯ ಶಮನಕ್ಕೆ ಹರಸಾಹಸ ಪಡುತ್ತಿದ್ದಾರೆ.
ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ಕ್ಷೇತ್ರಕ್ಕೆ ಆಗಮಿಸಲಿದ್ದು, ಇದಕ್ಕೂ ಮುನ್ನ ಈಶ್ವರಪ್ಪ ಅವರ ಮನವೊಲಿಸಲು ರಾಜ್ಯ ಬಿಜೆಪಿ ನಾಯಕರು ಹರಸಾಹಸ ಪಡುತ್ತಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಈಶ್ವರಪ್ಪ ನಿವಾಸಕ್ಕೆ ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿಎಸ್ ಅರುಣ್ ಮತ್ತು ರವಿಕುಮಾರ್ ಭೇಟಿ ನೀಡಿ ಈಶ್ವರಪ್ಪನವರ ಜೊತೆ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.
ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪನವರ ನಿವಾಸಕ್ಕೆ ಮೂವರು ನಾಯಕರು ಭೇಟಿ ನೀಡಿದ್ದು, ಈಶ್ವರಪ್ಪನವರ ಜೊತೆ ಕೂತು ಸರಿ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ನಾಳೆ ಜಿಲ್ಲೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ನಾಳೆ ನಡೆಯುವ ಬೃಹತ್ ಬಹಿರಂಗ ಸಭೆಗೆ ಈಶ್ವರಪ್ಪನವರನ್ನ ಆಹ್ವಾನಿಸಿದ್ದಾರೆ. ಆದರೆ ಬಿಜೆಪಿ ನಾಯಕರ ಸಂಧಾನಕ್ಕೆ ಒಪ್ಪದ ಈಶ್ವರಪ್ಪ, ಬಿಜೆಪಿ ನಾಯಕರ ಮಾತಿಗೆ ಡೋಂಟ್ ಕೇರ್ ಎಂದಿದ್ದಾರೆ.
ಈಶ್ವರಪ್ಪ ನಿವಾಸದಲ್ಲಿ ನಡೆದ ಬಿಜೆಪಿ ಸಂಧಾನ ವಿಫಲಗೊಂಡಿದೆ. ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಬಿಜೆಪಿ ನಾಯಕರು ಈಶ್ವರಪ್ಪ ನಿವಾಸದಿಂದ ವಾಪಸ್ ಹೋಗಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply