ಶಿವಮೊಗ್ಗದಲ್ಲಿ ಪೊಲೀಸರ ರೂಟ್ ಮಾರ್ಚ್ ! ಕಾರಣವೇನು ?
ಶಿವಮೊಗ್ಗ : ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ಆರ್.ಎ.ಎಫ್ ವತಿಯಿಂದ ಶನಿವಾರ ಮಧ್ಯಾಹ್ನ ರೂಟ್ ಮಾರ್ಚ್ ನಡೆಸಲಾಗಿದೆ.
18ನೆಯ ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ಮುಂಜಾಗ್ತಾ ಕ್ರಮವಾಗಿ ಶಿವಮೊಗ್ಗ ಪೊಲೀಸ್ ಇಲಾಖೆ 16/03/2024ರ ಶನಿವಾರ ಮಧ್ಯಾಹ್ನ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪಿಐ ರವಿ ಪಾಟೀಲ್ ಅವರ ನೇತೃತ್ವದಲ್ಲಿ ನಗರದ ವಿವಿಧ ಭಾಗಗಳಲ್ಲಿ ರೂಟ್ ಮಾರ್ಚ್ ನಡೆಸಿದ್ದಾರೆ.
ನಗರದ ಸಂದೇಶ ಮೋಟರ್ ನಿಂದ ಶುರುವಾದ ಶಿವಮೊಗ್ಗ ಪೊಲೀಸರ ರೂಟ್ ಮಾರ್ಚ್ ನಂತರ ಅಶೋಕ ವೃತ್ತದಿಂದ ಹೊರಟು ಅಮೀರ್ ಅಹ್ಮದ್ ಸರ್ಕಲ್, ಶಿವಪ್ಪ ನಾಯಕ ಸರ್ಕಲ್, ಕರ್ನಾಟಕ ಸಂಘದ ರಸ್ತೆಯ ಮೂಲಕ ತೆರಳಿ, ಹಳೆ ಬಸ್ ಸ್ಟಾಪ್ ಬಳಿ ಮುಕ್ತಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ವಸಂತ್, ಪಿಎಸ್ಐ, ಲೋಕೇಶ್ ಪಿಎಸ್ಐ ಮತ್ತು ಸುರೇಶ್ ಪಿಎಸ್ಐ ಹಾಗೂ ಆರ್. ಎ. ಎಫ್ ತುಕಡಿಯ ಅಧಿಕಾರಿ ಸಿಬ್ಬಂಧಿಗಳು ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply