ಗೋಪಿ ಸರ್ಕಲ್ ನಲ್ಲಿ ಡಿಜೆ ಹಾಡಿಗೆ ಯುವಕ ಯುವತಿಯರ ಸಕ್ಕತ್ ಸ್ಟೆಪ್ಸ್ ! ರೈನ್ ಡಾನ್ಸ್ ! ಹೋಳಿ ಹಬ್ಬದಲ್ಲಿ ಮಿಂದೆದ್ದ ಶಿವಮೊಗ್ಗ ಜನತೆ !

ಗೋಪಿ ಸರ್ಕಲ್ ನಲ್ಲಿ ಡಿಜೆ ಹಾಡಿಗೆ ಯುವಕ ಯುವತಿಯರ ಸಕ್ಕತ್ ಸ್ಟೆಪ್ಸ್ ! ರೈನ್ ಡಾನ್ಸ್ ! ಹೋಳಿ ಹಬ್ಬದಲ್ಲಿ ಮಿಂದೆದ್ದ ಶಿವಮೊಗ್ಗ ಜನತೆ !

ಶಿವಮೊಗ್ಗ : ಗೋಪಿ ವೃತ್ತ ಮಂಗಳವಾರ ರಂಗಿನ ಅಂಗಳವಾಗಿ ಕಂಗೊಳಿಸುತ್ತಿತ್ತು. ಭ್ರಾತೃತ್ವದ ಕೊಂಡಿ ಬೆಸೆಯುವ ಹಬ್ಬಗಳಲ್ಲಿ ಒಂದಾದ ಹೋಳಿ ಹಬ್ಬ ನಗರದ ಜನತೆಯ ಮನಸ್ಸನ್ನು ಓಕುಳಿಯಲ್ಲಿ ತೇಲಿಸಿತು.

ಪ್ರತಿ ವರ್ಷದಂತೆ ಈ ಭಾರಿಯು ನಗರದ ಗೋಪಿ ವೃತ್ತದಲ್ಲಿಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಹೋಳಿ ಹಬ್ಬಕ್ಕೆ ವ್ಯವಸ್ಥೆ ಮಾಡಲಾಗಿದೆ.ಹಿರಿಯ–ಕಿರಿಯರೆನ್ನದೆ, ಜಾತಿ ಭೇದ–ಭಾವ ಮರೆತು ಭಾವೈಕ್ಯದಿಂದ ಕೂಡಿ ಬಣ್ಣದ ಜಗತ್ತಿನಲ್ಲಿ ಯುವಕ,ಯುವತಿಯರು, ಮಕ್ಕಳು, ಮಹಿಳೆಯರು ಪುರುಷರು ರೈನ್ ಡಾನ್ಸ್ ನಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದಾರೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಇನ್ನು, ಬಣ್ಣದ ಒಕುಳಿಯಲ್ಲಿ ಮಿಂದಿದ್ದ ಯುವಕರು ಶಿವಮೊಗ್ಗ ನಗರದ ವಿವಿಧೆಡೆ ಬೈಕ್ ರೈಡ್ ಮಾಡುತ್ತಿದ್ದಾರೆ. ನಗರದಾದ್ಯಂತ ಬೈಕ್‍ನಲ್ಲಿ ಸುತ್ತಾಡಿದ ಯುವಕರು, ಬಣ್ಣ ಎರಚುತ್ತಿದ್ದಾರೆ.

ಗೋಪಿ ವೃತ್ತದಲ್ಲಿ ಹೋಳಿ ಆಚರಣೆ ಕಾರಣ ನೆಹರೂ ರಸ್ತೆ, ಬಾಲರಾಜ ಅರಸ್ ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು.ಕಾರ್ಯಕ್ರಮಕ್ಕೆ ಬಂದಿದ್ದವರು ಈ ರಸ್ತೆಗಳಲ್ಲಿ ತಮ್ಮ ವಾಹನಗಳ ಪಾರ್ಕಿಂಗ್ ಮಾಡಿದ್ದರು. ಹೋಳಿ ಆಚರಣೆ ಕಣ್ತುಂಬಿಕೊಳ್ಳಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಎಂ.ಜಿ.ಪ್ಯಾಲೇಸ್ ಕಟ್ಟಡ, ಶ್ರೀನಿಧಿ ಮಳಿಗೆ ಇರುವ ಕಟ್ಟಡ ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳ ಬಾಲ್ಕನಿಯಲ್ಲಿ ನಿಂತು ಜನರು ವೀಕ್ಷಿಸಿದರು. ಮೈತುಂಬ ಬಣ್ಣ ಹಚ್ಚಿಕೊಂಡ ಜನರು, ಸೆಲ್ಫಿ, ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು.

ಹೋಳಿ ಹಬ್ಬದ ಸಂಭ್ರಮದ ನಡುವೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.