ಭಾರತೀಯ ಜನತಾ ಪಾರ್ಟಿ ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತದೆ – ಬಿ ವೈ ರಾಘವೇಂದ್ರ
ಸಾಗರ : ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದೇ ಬರುತ್ತದೆ. ನರೇಂದ್ರ ಮೋದಿಯವರು ಪ್ರಧಾನಿ ಆಗೇ ಆಗುತ್ತಾರೆ ಎಂದು ಬಿ ವೈ ರಾಘವೇಂದ್ರ ಹೇಳಿದರು.
ಸಾಗರ ತಾಲೂಕಿನ ಆನಂದಪುರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬಿ ವೈ ರಾಘವೇಂದ್ರ ಈ ಬಾರಿ ಮೋದಿಯವರು ಗೆಲ್ಲುವುದು ಖಂಡಿತ ಅದಕ್ಕಾಗಿ ಜನಸಾಮಾನ್ಯರು ಕಾರ್ಯಕರ್ತರು ಮೋದಿಯ ಪರವಾಗಿ ರಾಘಣ್ಣನ ಪರವಾಗಿ ಬೆಂಬಲ ನೀಡಬೇಕು.
ದೇಶದಲ್ಲಿ ಯಾರೂ ಮಾಡದಂತಹ ಅಭಿವೃದ್ಧಿ ಕಾರ್ಯಗಳು ಮೋದಿಯವರು ಮಾಡಿದ್ದಾರೆ. ದೇಶ ವಿದೇಶಗಳನ್ನು ಸಹ ಇವರು ಹೆಸರನ್ನು ಮಾಡಿದ್ದಾರೆ ಅಂತಹ ಅಭೂತಪೂರ್ವ ನಾಯಕ ಇವರು. ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಸಹ ತಂದಿದ್ದಾರೆ. ಹಾಗೆ ರೈತರಿಗೆ ಕೂಲಿ ಕಾರ್ಮಿಕರಿಗೆ ಬಡ ಜನರಿಗೆ ಮೋದಿ ಸರ್ಕಾರ ಆರ್ಥಿಕವಾಗಿ ಸಹಾಯವನ್ನು ಮಾಡಿದೆ.
ಈ ಬಾರಿ ಚುನಾವಣೆಯಲ್ಲಿ ಎಲ್ಲಾ ಮತದಾರರು ಮೋದಿಯ ಪರವಾಗಿ ನಿಂತು ರಾಘಣ್ಣನಿಗೆ ಮತ ನೀಡಿ ನಿಮ್ಮ ಜಿಲ್ಲೆಯ ಹಾಗೂ ದೇಶದ ಅಭಿವೃದ್ಧಿಯ ಕಡೆ ಗಮನ ಹರಿಸಿ ಉತ್ತಮವಾದ ಸರ್ಕಾರ ಬರಲು ಎಲ್ಲರೂ ಸಹಕಾರ ನೀಡಿ ಎಂದು ಮಾತನಾಡಿದರು.
ಜಿಲ್ಲೆಯ ಅಭಿವೃದ್ಧಿಗಾಗಿ ಬಿ ವೈ ರಾಘವೇಂದ್ರ ಸಾಕಷ್ಟು ಶ್ರಮ ವಹಿಸಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.
ಚಿಕ್ಕ ಹಳ್ಳಿಗಳಿಂದ ಹಿಡಿದು ದೊಡ್ಡ ಪಟ್ಟಣದವರಿಗೆ ಆಗಬೇಕಾದ ಎಲ್ಲಾ ಅಭಿವೃದ್ಧಿಯ ಕಾರ್ಯವನ್ನು ಮಾಡಿದ ಕೀರ್ತಿ ರಾಘಣ್ಣನವರಿಗೆ ಸಲ್ಲುತ್ತದೆ ಹೀಗಾಗಿ ಬರುವ ಚುನಾವಣೆಯಲ್ಲಿ ರಾಘಣ್ಣನಿಗೆ ಮತ್ತೊಮ್ಮೆ ಆಶೀರ್ವದಿಸಿ ಎಂದು ಸಾಗರ ವಿಧಾನಸಭಾ ಮಾಜಿ ಶಾಸಕರು ಹರತಾಳು ಹಾಲಪ್ಪರವರು ಮಾತನಾಡಿದರು .
ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾ ಮುಖಂಡರು ತಾಲೂಕು ಮುಖಂಡರು ಹೋಬಳಿಯ ಮುಖಂಡರು ಹಾಗೂ ಸ್ಥಳೀಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ಅಮಿತ್ ಆನಂದಪುರ
Leave a Reply