ಇನ್ಸ್ಟಾಗ್ರಾಮ್ ನಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ! ತಕ್ಷಣ ಅಲರ್ಟ್ ಆದ ಪೊಲೀಸರು ! ಯುವಕನ ವಿರುದ್ಧ ಕೇಸ್ !
ಶಿವಮೊಗ್ಗ : ನಗರದಲ್ಲಿ ಯುವಕನೊಬ್ಬ ಕೋಮು ಪ್ರಚೋದನೆಯ 14 ಸೆಕೆಂಡ್ ಗಳ ವಿಡಿಯೋ ಒಂದನ್ನು ತನ್ನ ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯುವಕನೊಬ್ಬ ತನ್ನ ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ ಪ್ಲಾನ್ A ಮತ್ತು ಪ್ಲಾನ್ B ಎಂಬ ಹೆಸರಿನ ಅರಬಿಕ್ ಭಾಷೆಯಲ್ಲಿ ಇರುವ 14 ಸೆಕೆಂಡ್ ಗಳ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾನೆ. ಇದು ಸಮಾಜದ ಶಾಂತಿಯನ್ನು ಕದಡುವಂತಹ ಕೋಮು ಪ್ರಚೋದನೆಯ ಪೋಸ್ಟ್ ಆಗಿದ್ದು. ಇದು ಒಂದು ಕೋಮಿನ ಜನರನ್ನ ಎತ್ತು ಕಟ್ಟುವಂತಹ ಕೆಲಸವಾಗಿದೆ.
ಈ ಬಗ್ಗೆ ಮಾಹಿತಿ ದೊರಕಿದ ಬೆನ್ನಲ್ಲೇ ತಕ್ಷಣವೇ ಅಲರ್ಟ್ ಆದ ಶಿವಮೊಗ್ಗ ಪೊಲೀಸರು ಪೋಸ್ಟ್ ಮಾಡಿದ ಯುವಕನ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ್ದಾರೆ. ಇದರ ಮೂಲಕ ಸಮಾಜದ ಶಾಂತಿಯನ್ನ ಕದಡುವ ವ್ಯಕ್ತಿಗಳಿಗೆ ಪೋಲಿಸ್ ಇಲಾಖೆ ಖಡಕ್ ಸಂದೇಶ ರವಾನೆ ಮಾಡಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply