ಈಶ್ವರಪ್ಪನವರ ಮನೆಯ ಸಮೀಪ ಬೆಳ್ಳಂಬೆಳಗ್ಗೆ ನಡೀತು ಘಟನೆ ! ಸಿಸಿಟಿವಿಯಲ್ಲಿ ಸೆರೆಯಾಯ್ತು ಖದೀಮರ ಕೃತ್ಯ !
ಶಿವಮೊಗ್ಗ : ನಗರದ ಗುಂಡಪ್ಪ ಶೆಡ್ ಬಳಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಮನೆಯ ಸಮೀಪ ಇಂದು ಬೆಳಗ್ಗೆ 5:00ಗಂಟೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನ ಕದ್ದು ಪರಾರಿಯಾಗಿರುವ ಘಟನೆ ಬೆಳ್ಳಂಬೆಳಿಗ್ಗೆ ನಡೆದಿದೆ.
ವಿಳಾಸ ಕೇಳುವ ನೆಪದಲ್ಲಿ ಒಂದೇ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು. ಮಹಿಳೆಯರಿಬ್ಬರನ್ನ ಅಡ್ಡಗಟ್ಟಿ ಮಾತನಾಡಿಸಿದ್ದಾರೆ. ಮಹಿಳೆಯರು ಆತಂಕಗೊಂಡು ಹಿಂದೆ ಸರಿದಿದ್ದಾರೆ. ಆಗ ಬೈಕ್ ಸವಾರರು ಮಹಿಳೆಯರೇ ಬಳಿ ವಿಳಾಸ ಕೇಳಿದ್ದಾರೆ.
ಬೈಕ್ ಸವಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹಿಳೆಯರು ಮುಂದಕ್ಕೆ ಸಾಗುತ್ತಾರೆ. ಅಲ್ಲಿಯವರೆಗೂ ಸುಮ್ಮನೆ ಇದ್ದ ಬೈಕ್ ಹಿಂಬದಿ ಸವಾರ ನಂತರ ಬೈಕ್ ನಿಂದ ಕೆಳಗಿಳಿದು ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಕಿತ್ತುಕೊಂಡು ಬೈಕ್ ಹತ್ತಿದ್ದಾನೆ. ಕಿತ್ತುಕೊಂಡ ಕ್ಷಣ ಮಾತ್ರದಲ್ಲಿ ಬೈಕ್ ಸವಾರರಿಬ್ಬರು ಎಸ್ಕೇಪ್ ಆಗಿದ್ದಾರೆ.
ಬೆಳಗಿನ ಜಾವ 5:00ಗಂಟೆಗೆ ಈ ಘಟನೆ ನಡೆದಿದ್ದು. ಬೆಳಗಿನ ಜಾವಾ ವಾಕಿಂಗ್ ಹೋಗುತ್ತಿದ್ದವರಿಗೆ ಮನೆಯ ಮುಂದೆ ನೀರು ಹಾಕುತ್ತಿದ್ದವರಿಗೆ ಈ ದೃಶ್ಯ ಕಾಣಿಸಿದೆ. ಮಹಿಳೆಯರು ಕೂಗಿಕೊಂಡ ನಂತರ ಅಲ್ಲಿದ್ದ ಸ್ಥಳೀಯರು ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಬೆಳಗಿನ ಜಾವ 5:00ಗಂಟೆಗೆ ನಡೆದ ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ, ಘಟನೆಯಲ್ಲಿ ಮಹಿಳೆಯ 30 ಗ್ರಾಮ್ ತೂಕದ ನ ಮಾಂಗಲ್ಯ ಸರ ಖದೀಮರು ಕಿತ್ತುಕೊಂಡು ಹೋಗಿದ್ದಾರೆ. ಇನ್ನು ಈ ಸಂಬಂಧ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply