ಗಾಡಿಕೊಪ್ಪದ ಬಳಿ ಗಾಂಜಾ ಮಾರಾಟ ಮಾಡುತಿದ್ದ ಆರೋಪಿ ಬಂಧನ !
ಶಿವಮೊಗ್ಗ : ನಗರದ ಗಾಡಿಕೊಪ್ಪದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ತುಂಗಾನಗರ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಗಾಡಿಕೊಪ್ಪದಿಂದ ಪುರದಾಳಿಗೆ ಹೋಗುವ ದಾರಿಯಲ್ಲಿ ಇರುವಂತಹ ತುಂಗಾ ಚಾನಲ್ ಸಮೀಪ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ದಾಳಿ ನಡೆಸಿದ ತುಂಗಾ ನಗರ ಠಾಣೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಿರಣ್ ಕುಮಾರ್ (30) ಎಂಬ ಕಲ್ಲಹಳ್ಳಿ ಹುಡ್ಕೋದ ವ್ಯಕ್ತಿಯನ್ನು ದಾಳಿ ಮಾಡಿ ಬಂದಿಸಿದ ಅಂದಾಜು ಮೌಲ್ಯ 15,000/- ರೂ ಗಳ 400 ಗ್ರಾಂ ತೂಕದ ಒಣ ಗಾಂಜಾ ಮತ್ತು ರೂ 950/- ನಗದು ಹಣವನ್ನು ಅಮಾನತುಪಡಿಸಿಕೊಳ್ಳಲಾಗಿದೆ.
ಆರೋಪಿ ವಿರುದ್ಧ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0165/2024 ಕಲಂ 20 (ಬಿ)NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply