ಆಯನೂರಿನಲ್ಲಿ ಸಿಡಿಲುಬಡಿದು 18 ಕುರಿಗಳು ಸಾವು ! ಮಾಲೀಕ ಕಣ್ಣೀರು !
ಶಿವಮೊಗ್ಗ : ತಾಲೂಕಿನ ಆಯನೂರಿನಲ್ಲಿ ಸಂಜೆ ವೇಳೆ ಸುರಿದ ಗುಡುಗು ಸಹಿತ ಮಳೆಗೆ ಸಿಡಿಲು ಬಡಿದು ಕುರಿಗಳು ಬಲಿಯಾಗಿರುವ ಘಟನೆ ನಡೆದಿದೆ.
ಮಳೆ ಬರುತ್ತಿದ್ದ ಕಾರಣ ಆಯನೂರು ಸಮೀಪ ಮಾವಿನ ಮರದ ಕೆಳಗಡೆ ಕುರಿಗಳನ್ನು ನಿಲ್ಲಿಸಿದ್ದರು, ಅದೇ ವೇಳೆ ಸಿಡಿಲು ಬಡಿದಿದ್ದು ಸಿಡಿಲ ಹೊಡೆತಕ್ಕೆ ಸರಿಸುಮಾರು 18 ಕುರಿಗಳು ಸಾವು ಕಂಡಿವೆ. ಸರಿ ಸುಮಾರು ಮೂರುವರೆ ಲಕ್ಷ ಮೌಲ್ಯದ ಕುರಿಗಳು ಸಾವಾಗಿದ್ದು ಮಾಲೀಕ ಜಾಕೀರ್ ಹುಸೇನ್ ಕಣ್ಣೀರು ಹಾಕಿದ್ದಾರೆ
ಸಂಜೆ ವೇಳೆ ಮಳೆಯಲ್ಲಿ ಸಿಡಿಲು ಬಡಿದ ಕಾರಣ ಈ ಘಟನೆ ನಡೆದಿದ್ದು, ಜಾಕಿರ್ ಹುಸೇನ್ ಎಂಬುವರಿಗೆ ಈ ಕುರಿಗಳು ಸೇರಿದ್ದಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply