ವರ್ಷದ ಮೊದಲ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ.
ಸಾಗರ : ತಾಲೂಕಿನ ಅನಂದಪುರ ಹೋಬಳಿಯಲ್ಲಿ ಮೊನ್ನೆ ಸುರಿದಂತಹ ವಿಪರೀತವಾದ ಧಾರಾಕಾರ ಮಳೆ ಹಾಗೂ ಗಾಳಿಯಿಂದಾಗಿ ಆನಂದಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಹಾಗೂ ಹಲವು ಮನೆಗಳ ಮೇಲೆ ಮರ ಬಿದ್ದು ಮನೆ ಹಾನಿ ಉಂಟಾಗಿದೆ.
ಇದರಿಂದಾಗಿ ನೊಂದ ಕುಟುಂಬಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಅವರಿಗೆ ಸಾಂತ್ವನ ನೀಡಿದರು.
ವಿಪರೀತ ಗಾಳಿ ಮಳೆಯಿಂದಾಗಿ ಈ ರೀತಿಯ ಅನಾಹುತ ಸಂಭವಿಸಿದೆ. ಇದರಿಂದ ನನ್ನ ಮನಸ್ಸಿಗೂ ತುಂಬಾ ಬೇಸರ ಉಂಟಾಗಿದೆ. ದೇವರ ದಯೆ ಚೆನ್ನಾಗಿದೆ ಯಾವುದೇ ರೀತಿಯಲ್ಲೂ ಪ್ರಾಣಕ್ಕೆ ಹಾನಿ ಉಂಟಾಗಿಲ್ಲ ಇಂದು ಶಾಸಕರು ಹೇಳಿದರು.
ನನ್ನ ಭಾಗದ ಜನರ ಕಷ್ಟ ನೋವು ಯಲ್ಲವನ್ನು ಆಲಿಸುತ್ತಾ ಧೈರ್ಯ ತುಂಬುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ವರದಿ : ಅಮಿತ್ ಆನಂದಪುರ
Leave a Reply