ಹೊಳೆಬಸ್ ಸ್ಟಾಪ್ ಬಳಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು ! ತುಂಗಾ ಸೇತುವೆ ಬಳಿ ಟ್ರಾಫಿಕ್ ಜಾಮ್ !
ಶಿವಮೊಗ್ಗ : ನಗರದ ಹೊಳೆ ಬಸ್ ನಿಲ್ದಾಣದ ತುಂಗಾ ಸೇತುವೆಯ ಬಳಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ವ್ಯಕ್ತಿ ಸಾವಾಗಿರುವ ಘಟನೆ ನಡೆದಿದೆ.
ಚಲಿಸುತ್ತಿರುವ ರೈಲಿನಿಂದ ಅಂದಾಜು 30 ರಿಂದ 40 ವಯಸ್ಸಿನ ವ್ಯಕ್ತಿ ಸರಿ ಸುಮಾರು 12 ಗಂಟೆಯ ಹೊತ್ತಿಗೆ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಕೆಳಗೆ ಬಿದ್ದ ಬೆನ್ನಲ್ಲೇ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ
ಇನ್ನೂ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ತುಂಗಾ ಸೇತುವೆ ಬಳಿ ಜಮಾಯಿಸಿದ್ದರು, ವಾಹನ ಸವಾರರು ಏನಾಯ್ತು ಎಂದು ನೋಡಲು ತೆರಳುತ್ತಿದ್ದರು, ಇದರಿಂದ ತುಂಗಾ ಸೇತುವೆ ಬಳಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇನ್ನು ರೈಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ವ್ಯಕ್ತಿ ಏಕೆ ರೈಲಿನಿಂದ ಬಿದ್ದರು ? ಹೇಗೆ ಬಿದ್ದರೂ ? ಎಂಬ ಮಾಹಿತಿ ತಿಳಿದುಬಂದಿಲ್ಲ. ಸ್ಥಳಕ್ಕೆ ಕೋಟೆ ಪೊಲೀಸ್ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply