ಅನಂದಪುರ: ಈ ದೇಶದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವತಂತ್ರವಾಗಿ ನಾವು ಜೀವನ ನಡೆಸುತ್ತಿದ್ದೇವೆ ಎಂದರೆ ಅದು ಅಂಬೇಡ್ಕರ್ ರವರು ನಮಗೆ ನೀಡಿದ ಸಂವಿಧಾನದ ಶಕ್ತಿಯ ಫಲದಿಂದ ಎಂದು ಭೀಮಸೇನೆ (ರಿ) ಅಧ್ಯಕ್ಷರಾದ ವಿಕಾಸ್ ಮಾತನಾಡಿದರು.
ಇಂದು ಆನಂದಪುರದ ದಾಸಕೊಪ್ಪ ಗ್ರಾಮದಲ್ಲಿ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಭೀಮಸೇನೆ ಅಧ್ಯಕ್ಷರಾದ ವಿಕಾಸ್. ಪಿ ನೆರವೇರಿಸಿದರು.
ಇಂದಿನ ದಿನಗಳಲ್ಲೂ ಸಹ ಅಸ್ಪೃಶ್ಯತಾ ಆಚರಣೆ ಭಾರತದಲ್ಲಿ ಸತ್ತಿಲ್ಲ . ದಿನ ಬೆಳಗಾದರೆ ಪತ್ರಿಕೆಯಲ್ಲಿ, ಮಾಧ್ಯಮಗಳಲ್ಲಿ ನಾವು ನೋಡುತ್ತೇವೆ. ಇದರಿಂದ ದಲಿತರೆಲ್ಲ ಒಟ್ಟುಗೂಡಬೇಕು ಈ ಸಮಾಜದಲ್ಲಿ ಅಸ್ಪೃಶ್ಯತೆ ಎಂಬ ಆಚರಣೆ ರದ್ದುಗೊಳಿಸಬೇಕು ಎಂದು ಹೇಳಿದರು.
ಲಿಂಗರಾಜ್ ಮಾಜಿ ಜಿಲ್ಲಾ ಡಿ.ಎಸ್.ಎಸ್.ಸಂಚಾಲಕರು ಮಾತನಾಡುತ್ತಾ ಪ್ರತಿಯೊಬ್ಬ ಭಾರತೀಯರು ಸಂವಿಧಾನವನ್ನು ಗೌರವಿಸಬೇಕು. ಹಾಗೆ ಅಂತಹ ಭವ್ಯವಾದ ಸಂವಿಧಾನವನ್ನು ಬರೆದ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರನ್ನು ಮನೆ ಮನ ದಲ್ಲಿ ಪೂಜಿಸಬೇಕು. ಅವರ ತತ್ವಾದರ್ಶ ಗಳನ್ನು ಹಾಗೆ ಅವರು ಚಿಂತನೆಗಳನ್ನು ನಾವೆಲ್ಲರೂ ಪಾಲಿಸಬೇಕು. ಇಂತಹ ಸದೃಢ ಭಾರತ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಪಾತ್ರ ಹಿರಿದಾದದ್ದು ಎಂದು ಹೇಳಿದರು.
ಆನಂದಪುರದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯುವರಾಜ್ ಕಂಬಳಿ ಮಾತನಾಡುತ್ತಾ .ನಾನು ಇಂತಹ ಉನ್ನತ ಹುದ್ದೆಯಲ್ಲಿ ಇದ್ದೇನೆ ಎಂದರೆ ಅದಕ್ಕೆ ಕಾರಣ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ . ಅವರು ಶಿಕ್ಷಣ, ಸಂಘಟನೆ ,ಹೋರಾಟ ಎಂಬ ತತ್ವವನ್ನು ಇಟ್ಟುಕೊಂಡು . ಈ ಸಮಾಜದ ಏಳಿಗೆಗಾಗಿ ಅಸ್ಪೃಶ್ಯತೆ ಹೋಗಲಾಡಿಸಲು ತಾವೇ ಸ್ವತಹ ಕೆಲ ನದಿಗಳ ನೀರನ್ನು ಹಾಗೂ ದೇವಾಲಯಗಳಿಗೆ ದಲಿತರು ಕರೆದುಕೊಂಡು ಹೋಗಿ ಪ್ರವೇಶವನ್ನು ಮಾಡುತ್ತಾರೆ. ನಾವು ಸಹ ಮನುಷ್ಯ ಜನ್ಮಕ್ಕೆ ಸೇರಿದವರೆಂದು ಸಾಬೀತುಪಡಿಸುತ್ತಾರೆ.
ನಂತರದಲ್ಲಿ ಅತಿ ವಿಜೃಂಭಣೆಯಿಂದ ಅಂಬೇಡ್ಕರ್ ಅವರ ಭಾವಚಿತ್ರವನ್ನು ವಾಹನ ಮೇಲೆ ಹೊತ್ತು ಕೊಂಡು ದಾಸಕೊಪ್ಪದಿಂದ ಆನಂದಪುರದ ರಾಜ ಬೀದಿಯಲ್ಲಿ ಸಂಗೀತದ ವಾದ್ಯದ ಮೂಲಕ ಮೆರವಣಿಗೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಹರಳಯ್ಯ ಸಮಾಜದ ರಾಜ್ಯ ಉಪಾಧ್ಯಕ್ಷರಾದ ವಾಸು ವಕೀಲರು ಮತ್ತು ಪಾಂಡುರಂಗ ಯುವಕರ ಸಂಘ ದಾಸಕೊಪ್ಪ ದ ಅಧ್ಯಕ್ಷರಾದ ನಾಗರಾಜ್ ಹಾಗೂ ಹೇಮು ಮತ್ತು ಊರಿನ ಗ್ರಾಮಸ್ಥರು ಹಾಗೂ ಭೀಮ್ ಸೇನೆಯ ಪದಾಧಿಕಾರಿಗಳು ಹಾಜರಿದ್ದರು.
ವರದಿ : ಅಮಿತ್ ಆನಂದಪುರ
Leave a Reply