ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು ! ಓರ್ವನಿಗೆ ಗಂಭೀರ ಗಾಯ ! ಸಮರ್ಪಕ ಸೂಚನ ಫಲಕ ಅಳವಡಿಸದಿರುವುದೇ  ಅಪಘಾತಕ್ಕೆ ಕಾರಣವಾಯ್ತಾ ?

ರಿಪ್ಪನ್ ಪೇಟೆ : ಸಾಗರ ರಸ್ತೆಯ ಎಪಿಎಂಸಿ ಮುಂಭಾಗದಲ್ಲಿ ಟಾಟಾ ಇಂಡಿಕಾ ಕಾರ್ ಒಂದು ಡಿವೈಡರ್ ಗೆ ಡಿಕ್ಕಿ ಹೊಡೆದಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಕೋಣಂದೂರು ಮೂಲದ ಒಂದೇ ಕುಟುಂಬದ ಐವರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ದೇವದಾಸ್ ಎಂಬುವರಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು, ದೇವದಾಸ್ ಅವರ ಪತ್ನಿ ಸವಿತಾ ಅವರ ಕಾಲು ಮುರಿತವಾಗಿದೆ ಮತ್ತು ಮಗಳು ಕೀರ್ತಿ ಅನ್ನುವವರಿಗೂ ತಲೆಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಅಪಘಾತವಾದ ಗಾಯಾಳುಗಳಿಗೆ ರಿಪ್ಪನ ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕೆತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ

ಡಿವೈಡರ್ ಗೆ ಸಮರ್ಪಕ ಸೂಚನಾ ಫಲಕ ಅಳವಡಿಸಿದಿರುವುದೇ ಅಪಘಾತಕ್ಕೆ ಕಾರಣವಾಯ್ತ ?

ಹೌದು ಸಾಗರ ರಸ್ತೆಯ ಎಪಿಎಂಸಿ ಮುಂಭಾಗದಲ್ಲಿರುವ ಸೂಚನಾ ಫಲಕ ಅಳವಡಿಸಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಬಹುದು, ಸಾಗರ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಎಪಿಎಂಸಿ ಮುಂಭಾಗ ಡಿವೈಡರ್ ಅನ್ನು ನಿರ್ಮಾಣ ಮಾಡಲಾಗಿದೆ.

ರಾತ್ರಿ ಹೊತ್ತು ಸಂಚಾರ ಮಾಡುವವರಿಗೆ ಡಿವೈಡರ್ ಕಾಣಿಸದೆ ಇರುವುದು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಈ ಭಾಗದಲ್ಲಿ ರಾತ್ರಿ ಸಮಯದಲ್ಲೇ ಹೆಚ್ಚು ಅಪಘಾತ ನಡೆಯುತ್ತಿದ್ದು, ಇನ್ನಷ್ಟು ಅಪಘಾತ ವಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಡಿವೈಡರ್ಗೆ ಸಮರ್ಪಕ ಸೂಚನಾ ಫಲಕ ಅಳವಡಿಸಬೇಕು ಎಂದು ಶಿವಮೊಗ್ಗ ಎಕ್ಸ್ ಪ್ರೆಸ್ ನ್ಯೂಸ್ ಕಳಕಳಿಯ ಮನವಿ ಮಾಡಿಕೊಳ್ಳುತ್ತದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.