ಶಿವಮೊಗ್ಗ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಇಂದು ಮತ್ತೆ ಮೂರನೇ ಬಾರಿ ಚುನಾವಣಾ ಅಧಿಕಾರಿಗಳಿಗೆ ನಾಮ ಪತ್ರ ಸಲ್ಲಿಸಿದ್ದಾರೆ.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು. ಇಂದು ಮೂರನೇ ಬಾರಿಗೆ ನಾಮಪತ್ರ ಸಲ್ಲಿಸುವ ಮೂಲಕ ತಾವು ಸ್ಪರ್ಧಿಸುವುದು ಖಚಿತಪಡಿಸಿದ್ದಾರೆ. ಈವೇಳೆ ಕೆ ಎಸ್ ಈಶ್ವರಪ್ಪ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮುಖಾಮುಖಿಯಾಗಿದ್ದಾರೆ
ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕೆ ಎಸ್ ಈಶ್ವರಪ್ಪ, ಒಬ್ಬ ಅಭ್ಯರ್ಥಿ ನಾಲ್ಕು ನಾಮಪತ್ರ ಸಲ್ಲಿಸಬಹುದಾಗಿದ್ದು, ಇಂದು ಮೂರನೇ ಬಾರಿ ನಾಮಪತ್ರ ಸಲ್ಲಿಸಿದ್ದು ನಾನು ಗೆಲ್ಲುವುದು ಗ್ಯಾರಂಟಿ. ಕಾಂಗ್ರೆಸಿನವರು ಇನ್ನು ಮತದಾರರ ಬಳಿಗೆ ಹೋಗಿಲ್ಲ ನಾನೊಬ್ಬನೇ ಮತದಾರರಿಗೆ ಬಳಿಗೆ ಹೋಗಿದ್ದೇನೆ. ಇನ್ನೂ ಕೆಲ ಕಾಂಗ್ರೆಸ್ಸಿನವರು ನಮ್ಮ ಅಭ್ಯರ್ಥಿ ಸರಿ ಇಲ್ಲ ನಿಮಗೆ ಮತ ಹಾಕೋದಾಗಿ ಹೇಳಿದ್ದಾರೆ.
ಸೋಲಿನ ಭಯ ಇರುವ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಇಂದು ಬಿಜೆಪಿಗೆ ಪರೋಕ್ಷವಾಗಿ ಟಾಂಗ ನೀಡಿದ ಈಶ್ವರಪ್ಪ ಚುನಾವಣೆಯಲ್ಲಿ ನಿಲ್ಲೋದು ಗ್ಯಾರಂಟಿ, ಗೆಲ್ಲೋದು ಗ್ಯಾರಂಟಿ, ಮೋದಿ ಕೈ ಹಿಡಿಯೋದು ಗ್ಯಾರಂಟಿ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply