ಸಾಗರ : ಇತ್ತೀಚಿಗಷ್ಟೇ ಮಗು ಒಂದು ಕೊಳವೆಬಾವಿ ಯಲ್ಲಿ ಬಿದ್ದು ಪ್ರಾಣಪಾಯದಿಂದ ಬದುಕಿ ಬಂದಿರುವ ಘಟನೆ ನಡೆದಿತ್ತು.
ಅದರ ಬೆನ್ನಲೇ ಈಗ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಆಟ ಆಡುತ್ತಿದ್ದ ವೇಳೆ ಆಯಾ ತಪ್ಪಿ ಬಾವಿಯಲ್ಲಿ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ
ಸಾಗರದ ಎಸ್.ಎನ್ ನಗರದಲ್ಲಿ ಬುಧವಾರ ಈ ಘಟನೆ ನಡೆದಿದೆ. ಮೃತ ಮಗುವನ್ನು ಮನ್ನತ್ (3) ಎಂದು ಗುರುತಿಸಲಾಗಿದೆ. ಮನೆ ಹಿಂಭಾಗ ಆಟವಾಡುತ್ತಿದ್ದಾಗ ಮಗು ಬಾವಿಗೆ ಬಿದ್ದಿದೆ ಎಂದು ಹೇಳಲಾಗಿದೆ.
ಸ್ಥಳೀಯರು ಮಗುವನ್ನು ಮೇಲಕ್ಕೆತ್ತಿದ್ದು, ಮಗುವಿನ ತಲೆ ಹಾಗೂ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply