ಶಿವಮೊಗ್ಗ : ಭದ್ರಾವತಿಯ ರೈಲ್ವೆ ಅಂಡರ್ ಪಾಸ್ ನಲ್ಲಿ ಲಾರಿವೊಂದು ಬ್ಯಾರಿಕೆಟ್ ಗೆ ಡಿಕ್ಕಿ ಹೊಡೆದು ರೈಲ್ವೆ ಹಳಿಗಳು ಏರುಪೇರಾಗಿ ಎರಡು ರೈಲುಗಳು ಸರಿಸುಮಾರು ಎರಡು ಗಂಟೆ ವಿಳಂಬವಾಗಿ ಸಂಚರಿಸಿದ ಘಟನೆ ಕಳೆದ ರಾತ್ರಿ ನಡೆದಿದೆ
ಭದ್ರಾವತಿ ನಗರದ ರೈಲ್ವೆ ಅಂಡರ್ ಪಾಸ್ ನಲ್ಲಿ ಭಾರಿ ಗಾತ್ರದ ನಿಗಿದಿಗಿಂತಲೂ ಎತ್ತರದ ವಾಹನಗಳು ಹೋಗದಂತೆ ಕಬ್ಬಿಣದ ಬ್ಯಾರಿಕೆಟ್ ಅನ್ನು ಅಳವಡಿಸಲಾಗಿತ್ತು. ಕಳೆದ ರಾತ್ರಿ ಈ ಕಬ್ಬಿಣದ ಬ್ಯಾರಿಕೆಟ್ ಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ಪರಿಣಾಮ ಬ್ಯಾರಿಕೆಟ್ ಮುರಿದು ರೈಲ್ವೆ ಹಳಿಗಳಿಗೆ ಹಾನಿಯಾಗಿತ್ತು.
ಕಬ್ಬಿಣದ ಬ್ಯಾರಿಕೆಟ್ ಮುರಿದು ರೈಲ್ವೆ ಹಳಿಗಳಿಗೆ ತಾಗಿದ್ದರಿಂದ, ರೈಲ್ವೆ ಹಳಿಗಳು ಏರುಪೇರಾಗಿ ತಾಂತ್ರಿಕ ದೋಷ ಉಂಟಾಗಿತ್ತು, ಕೂಡಲೇ ಎಚ್ಚರವಹಿಸಿದ ರೈಲ್ವೆ ಸಿಬ್ಬಂದಿಗಳು ತಕ್ಷಣವೇ ಹಳಿ ರಿಪೇರಿ ಕಾಮಗಾರಿ ಆರಂಭಿಸಿದ್ದರು, ರೈಲ್ವೆ ಹಳಿ ಏರುಪೇರಾಗಿದ್ದ ಕಾರಣ ಶಿವಮೊಗ್ಗ ಭದ್ರಾವತಿ ನಡುವೆ ರೈಲು ಸಂಚಾರ ಕೆಲಕಾಲ ಸ್ಥಕಿತಗೊಂಡಿತ್ತು.
ಹಳ್ಳಿ ಏರುಪೇರಾಗಿದ್ದ ಕಾರಣ, 4 : 45ಕ್ಕೆ ಶಿವಮೊಗ್ಗ ತಲುಪಬೇಕಿದ್ದ ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲು 6:45 ಕ್ಕೆ ಶಿವಮೊಗ್ಗ ತಲುಪಿದೆ. ಹಳಿ ರಿಪೇರಿ ಆಗುವವರೆಗೂ ಭದ್ರಾವತಿಯ ನಿಲ್ದಾಣದಲ್ಲಿ ಈ ರೈಲು ನಿಂತಿತ್ತು.
ಇನ್ನು ಶಿವಮೊಗ್ಗದಿಂದ 5 : 15 ಕ್ಕೆ ಹೊರಡಬೇಕಿದ್ದ ಬೆಂಗಳೂರುಜನಶತಾಬ್ದಿ ರೈಲು ಸುಮಾರು ಬೆಳಗ್ಗೆ 6.355ಕ್ಕೆ ಹೊರಟಿದೆ. ವಿಳಂಬಕ್ಕೆ ಕಾರಣ ಗೊತ್ತಾಗದೆ ಪ್ರಯಾಣಿಕರು ಗೊಂದಲಕ್ಕೀಡದ ಘಟನೆ ನಡೆದಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply