ಶಿವಮೊಗ್ಗ : ಈ ಬಾರಿ ಅರ್ಜುನನ ಎದುರಿಗೆ ಭೀಷ್ಮ ಇದ್ದಾನೆ. ಅರ್ಜುನನ ರಥದಲ್ಲಿ ಕೃಷ್ಣ ಇದ್ದಾನೆ. ಆದರೆ ಭೀಷ್ಮ ಕೃಷ್ಣನ ಪೋಟೋ ಇಟ್ಟುಕೊಂಡಿದ್ದಾನೆ ಎಂದು ಕಾಳಿ ಸ್ವಾಮಿ ಎಂದೇ ಖ್ಯಾತರಾಗಿರುವ ಋಷಿಕುಮಾರ ಸ್ವಾಮೀಜಿ ಶಿವಮೊಗ್ಗದಲ್ಲಿ ಹೇಳಿದರು.
ನಗರದಲ್ಲಿ ಪತ್ರಿಕಾಗಾರದೊಂದಿಗೆ ಮಾತನಾಡಿದ ಇವರು ಶಿವಮೊಗ್ಗ ಲೋಕಸಭಾ ಕಣವನ್ನು ಕುರುಕ್ಷೇತ್ರ ಯುದ್ಧಕ್ಕೆ ಹೋಲಿಸಿದ ಅವರು ಬಿ.ವೈ.ರಾಘವೇಂದ್ರ ಅವರನ್ನು ಅರ್ಜುನನಿಗೆ ಮತ್ತು ಕೆ.ಎಸ್ ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದರು.
ಭೀಷ್ಮ ಶರಪಂಜರದ ಮೇಲೆ ಮಲಗುವ ಸಾಧ್ಯತೆಯಿದೆ. ಧರ್ಮ ಶಾಸ್ತ್ರ ಧರ್ಮವಾಗಿ ಯುದ್ದ ಮಾಡುವಂತೆ ಹೇಳುತ್ತದೆ. ಧರ್ಮದ ಜೊತೆಯಲ್ಲಿ ಇದ್ದವರು ಅಧರ್ಮವಾಗಿ ನಡೆದು ಕೊಳ್ಳುತ್ತಿದ್ದಾರೆ. ಧರ್ಮ ಯುದ್ದದಲ್ಲಿ ಅರ್ಜುನನಿಗೆ ಜಯ ಸಿಕ್ಕೆ ಸಿಗುತ್ತದೆ ಎಂದು ಋಷಿಕುಮಾರ ಸ್ವಾಮೀಜಿ ಹೇಳಿದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply