ಶಿವಮೊಗ್ಗ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಕ್ಯಾಂಪ್ನಲ್ಲಿ ರಾಮ ನವಮಿ ದಿನದಂದು ಎರಡು ಕೋಮಿನ ಯುವಕರ ನಡುವೆ ಘರ್ಷಣೆ ನಡೆದು, ಇಬ್ಬರು ಹಿಂದು ಯುವಕರಿಗೆ ಚಾಕು ಇರಿದಿರುವ ಘಟನೆ ನಡೆದಿದೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆಗೆ ಪಡೆಯುತ್ತಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಲ್ಲೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ನಲ್ಲೂರು ಕ್ಯಾಂಪ್ನಲ್ಲಿ 2022ರಲ್ಲೂ ಎರಡು ಕೋಮುಗಳ ನಡುವೆ ಜಗಳ ಆಗಿತ್ತು. ಈ ಬಾರಿಯು ರಾಮನವಮಿ ದಿನದಂದು ಎರಡು ಕೋಮಿನ ಯುವಕರ ನಡುವೆ ಗಲಾಟೆ ನಡೆದಿದೆ.
ಹನುಮಂತ, ಗೋಪಿ ಎಂಬುವರಿಗೆ ಮುಸ್ಲಿಂ ಯುವಕರ ಗುಂಪು ಚಾಕು ಇರಿದಿತ್ತು. ಚಾಕು ಇರಿತದ ವೇಳೆ ಯುವಕರಿಗೆ ಗಂಭೀರ ಗಾಯವಾಗಿದೆ. ಗುರಾಯಿಸಿ ನೋಡಿದ್ರು ಅನ್ನೋ ಕಾರಣಕ್ಕೆ ಚಾಕು ಇರಿಯಲಾಗಿದೆ.ಹಲ್ಲೆ ನಡೆಸಿದ ಯುವಕರು ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರಡು ಗುಂಪುಗಳ ನಡುವೆ ಹಳೆಯ ವೈಷಮ್ಯದ ಹಿನ್ನಲೆಯಲ್ಲಿ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ. ಗಾಯಗೊಂಡವರಿಗೆ ಶಿವಮೊಗ್ಗಕ್ಕೆ ಕರೆದುಕೊಂಡು ಚಿಕಿತ್ಸೆ ನೀಡಲಾಗಿದೆ. ಗೋಪಿ ಶಿವಮೊಗ್ಗದ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply