ಶಿವಮೊಗ್ಗ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ವಿಶ್ವ ಹಿಂದೂ ಪರಿಷತ್ , ಬಜರಂಗದಳ ಮತ್ತು ಮಾತೃಶಕ್ತಿ-ದುರ್ಗಾವಾಹಿನಿ ಕೋಟೆ ಪ್ರಖಂಡ ವತಿಯಿಂದ ಇಂದು ನಗರದ ಶಿವಪ್ಪ ನಾಯಕ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯ ಸಂದರ್ಭದಲ್ಲಿ ಸಂಘಟನೆಯ ಮುಖಂಡ ರಾಜೇಶ್ ಗೌಡ ಮಾತನಾಡಿ ಎಂಟು ತಿಂಗಳ ಹಿಂದೆ ಬಂದ ಕಾಂಗ್ರೆಸ್ ಸರ್ಕಾರ ಹಿಂದೂ ಯುವಕ ಯುವತಿ ಮಹಿಳೆಯರ ವಿರುದ್ಧ ಪಿತೂರಿ ನಡೆಸುತ್ತಲೇ ಬಂದ ಪರಿಣಾಮ ಇಂದು ನೇಹಾಳ ಹತ್ಯೆ ನಡೆದಿದೆ. ಹುಬ್ಬಳ್ಳಿಯಲ್ಲಿ ಫಯಾಜ್ ಎಂಬತಾ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರ ಪುತ್ರಿ ನೇಹಾಳನ್ನು ಕೊಲೆ ಮಾಡಿದ್ದಾನೆ. ನೇಹಾಳನ್ನ ಲವ್ ಜಿಹಾದಿಗೆ ಬಲಿ ಕೊಡಲು ಹಿಂದೆ ಬಿದ್ದಿದ್ದ ಈತ ನಾಲ್ವರ ಸಹಾಯದಿಂದ ಈ ಕೊಲೆ ಮಾಡಿದ್ದಾನೆ. 38 ವರ್ಷಗಳಿಂದ ಹಿಂದೂ ಸಂಘಟನೆ ಹಿಂದೂ ಹೆಣ್ಣು ಮಕ್ಕಳನ್ನ ಎಚ್ಚರಿಸುತ್ತಾ ಬಂದರೂ ನೇಹಾಳನ್ನ ರಕ್ಷಿಸಲು ಸಾಧ್ಯವಾಗಿಲ್ಲ. ಇಂದು ನೇಹಾಳನ್ನ ನಾವು ಕಳೆದುಕೊಂಡಿದ್ದೇವೆ ನಾವು ಪೂಜೆ ಮಾಡುವ ಮಹಿಳೆಯರಿಗೆ ರಕ್ಷಣೆ ಇಲ್ಲ ಅಂದರೆ ಇಂತಹ ನಾಯಕತ್ವ ನಮಗೆ ಬೇಡ ಈ ಹತ್ಯೆಯ ಸಂಬಂಧ ಸ್ಟ್ರಾಂಗ್ ಚಾರ್ಜ್ ಶೀಟ್ ಸಲ್ಲಿಸಬೇಕು, ಸ್ಟ್ರಾಂಗ್ ಕೇಸ್ ಹಾಕಿ ಆರೋಪಿಯನ್ನ ಗಲ್ಲಿಗೇರಿಸಬೇಕು, ಇಲ್ಲವಾದಲ್ಲಿ ಹಿಂದೂ ಸಂಘಟನೆ ಸುಮ್ಮನೆ ಕೂರಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಇನ್ನೂ ಚನ್ನಗಿರಿಯಲ್ಲಿ ರಾಮನವಮಿಯ ಸಂದರ್ಭದಲ್ಲಿ ಕೋಸಂಬರಿ ಹಂಚುವ ವಿಷಯದಲ್ಲಿ ಗಲಭೆ ನಡೆದಿದೆ. ಮುಸ್ಲಿಂ ಗೂಂಡಾಗಳು ಭಾರತವನ್ನು ಇಸ್ಲಾಮಿಕರಣ ಮಾಡಲು ಕಾಂಗ್ರೆಸ್ ಸರ್ಕಾರ ಬೆನ್ನೆಲುಬಾಗಿ ನಿಂತಿದೆ, ಹಲ್ಲೆ ಮಾಡುವ ಗೂಂಡಾಗಳು ನಮ್ಮ ಬ್ರದರ್ಸ್ ಎನ್ನುವುದಾದರೆ ಸಿಎಂ ಡಿಸಿಎಂ ಗಳೆಲ್ಲ ಪಾಕಿಸ್ತಾನಕ್ಕೆ ಹೋಗಿಬಿಡಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ವಿ ವಾಂಟ್ ಜಸ್ಟೀಸ್, ರಕ್ಷಿಸಿ ರಕ್ಷಿಸಿ ಹಿಂದೂ ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ರಾಜೇಶ್ ಗೌಡ, ಸುರೇಶ್ ಬಾಬು, ಸಚಿನ್, ಅಂಕುಶ್, ಅರವಿಂದ್ ನಟರಾಜ್, ನಾರಾಯಣ ವರ್ಣೇಕರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply