ಶಿವಮೊಗ್ಗ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಇಂದು ಶಿವಮೊಗ್ಗದ ಕೋರ್ಟ್ ಸರ್ಕಲ್ ನ ಬಳಿ ಕೆ ಎಸ್ ಈಶ್ವರಪ್ಪನವರ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು
ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆಎಸ್ ಈಶ್ವರಪ್ಪ ಅವರ ನೇತೃತ್ವದಲ್ಲಿ ನೇಹಾ ಹತ್ಯೆ ಖಂಡಿಸಿ ಜೈಲ್ ವೃತ್ತದಿಂದ ಬೃಹತ್ ಸಂಖ್ಯೆಯಲ್ಲಿ ಹೊರಟ ರಾಷ್ಟ್ರಭಕ್ತರ ಬಳಗದ ಮೆರವಣಿಗೆ ಕೋರ್ಟ್ ಸರ್ಕಲ್ ( ಮಹಾವೀರ ವೃತ್ತ) ತಲುಪಿತ್ತು. ಕೋರ್ಟ್ ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನೇಹಾ ಕೊಲೆ ಕೇಸ್ ಅನ್ನು ಆಕಸ್ಮಿಕವಾಗಿ ಎಂದು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯ, ಜಿ ಪರಮೇಶ್ವರ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ, ಅವರಿಗೆ ನಿಮ್ಮ ಮಕ್ಕಳಿಗೆ ಹೀಗಾಗಿದ್ದರೆ ಏನು ಮಾಡುತ್ತಿರಿ ಲವ್ ಜಿಹಾದ್ ಆಕಸ್ಮಿಕ ಎಂದು ಹೇಳಿದ್ರೆ ನಿಮ್ಮ ಹೆಂಡ್ತಿ ಸುಮ್ಮನೆ ಇರ್ತಿದ್ದಾ? ನೀನು ಮನುಷ್ಯನಾ ಎಂದು ಪ್ರಶ್ನಿಸುತ್ತಿದ್ದರು.ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ
ಒಂದು ವೇಳೆ ಫಯಾಜ್ ಎನ್ನುವ ಆರೋಪಿ ಸಮಾಜದ ಕೈಗೆ ಸಿಕ್ಕಿದ್ದರೆ ತುಂಡು ತುಂಡು ಆಗುತ್ತಿದ್ದ. ನೇಹಾ ಹಿರೇಮಠ ಅವರ ಕೊಲೆ ಆಕಸ್ಮಿಕನೋ ಅಥವಾ ಲವ್ ಜಿಹಾದಿ ಎಂದು ತೀರ್ಮಾನಿಸುವುದು ಸರ್ಕಾರವಲ್ಲ, ನೆಹಾಳ ಕೊಲೆ ಕೇಸನ್ನು ಸರ್ಕಾರ ಸಿಬಿಐಗೆ ಒಪ್ಪಿಸಬೇಕು. ಆಗ ಸತ್ಯಾಂಶ ಹೊರಗೆ ಬರಲಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ, ಪುತ್ರ ಕಾಂತೇಶ್, ದಿಲೀಪ್ ಕುಮಾರ್, ಸುವರ್ಣ ಶಂಕರ್ , ಪಾಲಿಕೆ ಸದಸ್ಯರಾದ ವಿಶ್ವಾಸ್, ಶಂಕರ್ ಗನ್ನಿ, ರಾಷ್ಟ್ರಭಕ್ತ ಬಳಗದವರು ಉಪಸ್ಥಿತರಿದ್ದರು
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply