ಸಾಗರ : ತಾಲೂಕಿನ ಆನಂದಪುರದಲ್ಲಿ ಬೈಕ್ ಗೆ ಜೆಸಿಬಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದು ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ.
ಆನಂದಪುರದ ಕೆರೆ ಏರಿ ಸಮೀಪ ಯುವಕರು ಬೈಕ್ ನಲ್ಲಿ ಚಲಿಸುತ್ತಿದ್ದಾಗ ಹೆದ್ದಾರಿ ರಸ್ತೆಗೆ ಜೆಸಿಬಿ ಚಾಲಕ ಅಜಾಗುರುಕತೆಯಿಂದ ಚಲಿಸುತ್ತಿದ್ದ ವೇಳೆ ಜೆಸಿಬಿಯ ಮುಂಭಾಗ ಚಲಿಸುತ್ತಿದ್ದ ವಾಹನ ಸವಾರರಿಗೆ ತಿವಿದಿದ್ದು ಇಬ್ಬರು ಸವಾರರ ಪರಿಸ್ಥಿತಿ ಗಂಭೀರವಾಗಿದ್ದು ತಕ್ಷಣ ಸ್ಥಳೀಯರು ಆನಂದಪುರದ ಆಸ್ಪತ್ರೆಗೆ ಸಾಗಿಸಿದರು.
ಹೊಟ್ಟೆ ಭಾಗಕ್ಕೆ ತೀವ್ರ ಪ್ರಮಾಣದ ಗಾಯವಾಗಿದ್ದ ಕಾರಣ ತಕ್ಷಣ ಅವರನ್ನು ಆನಂದಪುರದ ಆಂಬುಲೆನ್ಸ್ ನಲ್ಲಿ ಶಿವಮೊಗ್ಗಕ್ಕೆ ಸಾಗಿಸಲಾಗುತ್ತಿತ್ತು,
ದುರಾದೃಷ್ಟವಶಾತ್ ಓರ್ವ ವಾಹನ ಸವಾರ ಸೈ ಹುಸೇನ್ ಎಡೆಹಳ್ಳಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ
ವರದಿ : ಅಮಿತ್ ಆನಂದಪುರ
Leave a Reply