ಶಿವಮೊಗ್ಗ : ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ವೈರಲ್ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದು, ಎಸ್‌ಐಟಿ ರಚನೆಯಾಗಿದೆ. ಯಾರು ತಪ್ಪು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸಬೇಕು. ಈ ನೆಲದ ಕಾನೂನಿನಲ್ಲಿ ಯಾರೇ ತಪ್ಪು ಮಾಡಿದರೂ ತಲೆಬಾಗಲೇಬೇಕು ಎಂದು ಹೇಳಿದರು.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಅನುಭವಿಸಲೇ ಬೇಕು. ಎಸ್‌ಐಟಿ(SIT) ರಚನೆಯಾಗಿದೆ ತನಿಖೆ ಮೂಲಕ ಸತ್ಯಾಂಶ ಹೊರ ಬರಲಿ. ಎಸ್‌ಐಟಿ ತಪ್ಪು ಸಾಬೀತು ಮಾಡಿದ್ರೆ ಶಿಕ್ಷೆ ಅನುಭವಿಸಲೇ ಬೇಕು. ಅಶ್ಲೀಲ ವಿಡಿಯೋ ಪ್ರಕರಣ ವೈಯಕ್ತಿಯವಾಗಿ ವ್ಯಕ್ತಿಯ ಹಿನ್ನೆಲೆಯಲ್ಲಿ ನಡೆದಿದೆ. ಪ್ರಜ್ವಲ್ ಪ್ರಕರಣದಲ್ಲಿ ಕುಟುಂಬವನ್ನು ಏಕೆ ಎಳೆಯುತ್ತೀರಾ..? ದೇವೇಗೌಡರು , ನನ್ನ ಹೆಸರನ್ನು ಏಕೆ ಇದರಲ್ಲಿ ಸೇರಿಸುತ್ತೀರಾ..? ಎಂದು ಹೆಚ್‌ಡಿಕೆ ಪ್ರಶ್ನಿಸಿದ್ದಾರೆ.
ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ ಎಂದು ಮಾಧ್ಯಮಗಳ ಮುಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿನಂತಿಸಿದ್ದಾರೆ
ಈ ಹಗರಣದಿಂದ ನನಗಷ್ಟೇ ಮುಜುಗರವಾಗೋದಿಲ್ಲ, ಇಡೀ ಸಮಾಜಕ್ಕೆ ಮುಜುಗರವಾಗುತ್ತದೆ ಎಂದು ಹೇಳಿದ ಅವರು ಇದರಲ್ಲಿ ಯಾರನ್ನೂ ವಹಿಸಿಕೊಳ್ಳಲು ಹೋಗಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದರು.
ಎಫ್.ಐ.ಆರ್ ಆಗಿದೆ, ಸತ್ಯಾಂಶ ಹೊರಬರಲಿ. ಎಸ್ ಐಟಿ ತನಿಖೆ ಮಾಡಿ ವರದಿಯನ್ನು ನೀಡಲಿ. ಹಾಸನದಲ್ಲಿ ಪೆನ್ ಡ್ರೈವ್ ಬಿಟ್ಟವರು ಯಾರು? ಪೆನ್ ಡ್ರೈವ್ ಹಿಂದೆ ಯಾರಿದ್ದಾರೆ ಗೊತ್ತಾಗಲಿ ಎಂದು ಹೇಳಿದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply