ಶಿವಮೊಗ್ಗ : ನಗರದ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನ ಬೃಹತ್ ಸಮಾವೇಶ ನಡೆಯುತ್ತಿದ್ದು, ರಾಹುಲ್ ಗಾಂಧಿ, ಡಿಸಿಎಂ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವು ರಾಜ್ಯ ರಾಷ್ಟ್ರ ಕಾಂಗ್ರೆಸ್ ನಾಯಕರು ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ರವರ ಪರ ಮತ ಬೇಟೆ ನಡೆಸುತ್ತಿದ್ದಾರೆ.
ಈ ವೇಳೆ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್ , ಪ್ರಜ್ವಲ್ ರೇವಣ್ಣ 400ಕ್ಕೂ ಅಧಿಕ ಮಹಿಳೆಯರ ಮೇಲೆ ರೇಪ್ ಮಾಡಿದ್ದಾನೆ ಮತ್ತು ವಿಡಿಯೋ ಕೂಡ ಮಾಡಿಕೊಂಡಿದ್ದಾನೆ ಇದನ್ನ ಸೆಕ್ಸ್ ಸ್ಕ್ಯಾಡಲ್ ಅಂತ ಅನ್ನೋದಿಲ್ಲ ಇದನ್ನು ಮಾಸ್ ರೇಪ್ ಅಂತಾರೆ ಎಂದು ಹೇಳಿದರು
ಕರ್ನಾಟಕದ ಜನತೆಯ ಮುಂದೆ ನಿಂತು ಪ್ರಧಾನಿ ನರೇಂದ್ರ ಮೋದಿ ಮಾಸ್ ರೇಪಿಸ್ಟ್ ಒಬ್ಬನನ್ನು, ಗೆಲ್ಲಿಸಿ ವೋಟ್ ಮಾಡಿ ಎಂದು ಕೇಳಿಕೊಳ್ಳುತ್ತಾರೆ, ಪ್ರಜ್ವಲ್ ರೇವಣ್ಣನಿಗೆ ಮತ ಕೊಟ್ಟರೆ ನನಗೆ ಮತ ಕೊಟ್ಟಂತೆ ಎಂದು ಕರ್ನಾಟಕ ಜನತೆಯ ಮುಂದೆ ನಿಂತು ಹೇಳುತ್ತಾರೆ , ಯಾವ ಪ್ರಧಾನಮಂತ್ರಿ ಪ್ರಜ್ವಲ್ ರೇವಣ್ಣನ ಪರವಾಗಿ ಮತ ಕೇಳಿದರು, ಆ ಪ್ರಧಾನಮಂತ್ರಿಗು ಮತ್ತು ರಾಜ್ಯದ ಪ್ರತಿಯೊಬ್ಬ ಬಿಜೆಪಿ ನಾಯಕನಿಗೂ ಗೊತ್ತಿತ್ತು ಪ್ರಜ್ವಲ್ ರೇವಣ್ಣನ ಈ ಕೆಲಸಗಳು, ಆದ್ರೂ ಮೈತ್ರಿ ಮಾಡಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರತಿಯೊಬ್ಬ ಮಹಿಳೆಯರ ಬಳಿ ಕ್ಷಮೆ ಕೇಳಬೇಕು ಯಾಕೆಂದರೆ ಒಬ್ಬ ಮಾಸ್ ರೇಪಿಸ್ಟನ್ನ ವೇದಿಕೆ ಕರೆತಂದು ಅವರ ಪರವಾಗಿ ಮತ ಕೇಳಿದ್ದಾರೆ ಇದರಿಂದ ಹಿಂದುಸ್ಥಾನದ ಎಲ್ಲಾ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ, ಇಡೀ ಜಗತ್ತಿನಲ್ಲಿ ಚರ್ಚೆ ಆಗ್ತಿದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಾಸ್ ರೇಪಿಸ್ಟ್ ಪರವಾಗಿ ಮತ ಕೇಳಿದ್ದಾರೆ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಇದು ಬಿಜೆಪಿಯ ವಿಚಾರಧಾರೆ ಎಂದು ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply