28 ವರ್ಷ ಸುದೀರ್ಘ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ವೀರಯೋಧನಿಗೆ ಅದ್ದೂರಿ ಸ್ವಾಗತ

ಸಾಗರ : 28 ವರ್ಷ ಸುದೀರ್ಘ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ವೀರಯೋಧನಿಗೆ ತವರೂರಲ್ಲಿ ಅದ್ದೂರಿ ಸ್ವಾಗತ ದೊರಕಿತು.

 ಸುಬೇದಾರ್ ಮಧು ಕುಮಾರ್ ವೀರಯೋಧ ಸುದೀರ್ಘ 28 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ್ದಾರೆ. ಸಾಗರ ತಾಲೂಕಿನ ಆನಂದಪುರದ ರೈಲ್ವೆ ನಿಲ್ದಾಣದಲ್ಲಿ ವೀರ ಯೋಧನಿಗೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಹೂವಿನ ಹಾರ ಹಾಕಿ ಸ್ವಾಗತಿಸಿ , ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಸುಬೇದಾರ್ ಮಾಧುಕುಮಾರ್ ರವರು ಮೂಲತಹ ಕಡಬಾ ತಾಲೂಕು ಇಚ್ಲಾಂಪಾಡಿ ಗ್ರಾಮದವರಾಗಿದ್ದ್ದು 1996 ರಲ್ಲಿ ಭೂ ಸೇನೆಗೆ ಸೇರಿದರು. ಪ್ರಸ್ತುತ ಆನಂದಪುರದ ಕೆಪಿಎಸ್ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಷ್ಮಾ ರವರು ಸುಬೇದಾರ್ ಮಧುಕುಮಾರ್ ರವರ ಧರ್ಮಪತ್ನಿ.

ಸುದ್ದಿಗಾರರೊಂದಿಗೆ ಮಾತನಾಡಿದ ಯೋಧ ಸುಬೇದಾರ್ ಮಧು ಕುಮಾರ್ ರವರು ನಿಜಕ್ಕೂ ಇದು ಜೀವನದ ಅವಿಸ್ಮರಣೀಯ ಕ್ಷಣ, ಭಾರತಾಂಬೆಯ ಸೇವೆ ಸಲ್ಲಿಸಿ ಆಗಮಿಸಿದ ನನಗೆ ಈ ಅದ್ದೂರಿ ಸ್ವಾಗತ ನಿಜಕ್ಕೂ ರೋಮಾಂಚನ ಉಂಟು ಮಾಡಿತು. ಭಾರತಾಂಬೆಯ ಸೇವೆ ಸಲ್ಲಿಸಿದ ನಾನೇ ಪುಣ್ಯವಂತ ಇನ್ನೊಂದು ಜನ್ಮವಿದ್ದರೆ ಮತ್ತೆ ಯೋಧನಾಗಿ ಸೇವೆ ಸಲ್ಲಿಸಬೇಕೆಂಬ ಆಸೆ ಇದೆ ಎಂದರು.

ಯುವಕರು ಸೇನೆಯತ್ತ ಮುಖ ಮಾಡಿ ಭಾರತಾಂಬೆಯ ಸೇವೆ ಸಲ್ಲಿಸಿ ಇದರಂತಹ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದು ಯುವಕರಿಗೆ ಕರೆ ನೀಡಿದರು.

ಸಂಭ್ರಮಾಚರಣೆಯಲ್ಲಿ ಊರಿನ ಗ್ರಾಮಸ್ಥರು, ಕೆಪಿಎಸ್ ಶಾಲೆಯ ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಸದಸ್ಯರುಗಳು, ಎಡೆ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಕನ್ನಡ ಸಂಘದ ಸದಸ್ಯರು ಸುತ್ತಮುತ್ತ ಮನೆಯವರು ಹಾಗೂ ಸ್ಥಳೀಯರು ಹಾಜರಿದ್ದರು.

ವರದಿ : ಅಮಿತ್ ಆನಂದಪುರ

 


Leave a Reply

Your email address will not be published.