ಶಿವಮೊಗ್ಗ : ಕಾರ್ಮಿಕ ದಿನಾಚರಣೆಯ ಪ್ರಯುಕ್ತ ನಗರದ ಶುಭಂ ಹೋಟೆಲ್ ನಲ್ಲಿ ಕಾರ್ಮಿಕರಿಗೆ ಮತದಾನ ಜಾಗೃತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಶುಭಂ ಹೋಟೆಲ್ ನ ಕಾರ್ಮಿಕರಿಗೆ ಮ್ಯೂಸಿಕಲ್ ಚೇರ್ ಆಡಿಸಿ ಮತದಾನದ ಜಾಗೃತಿಯ ಪ್ರತಿಜ್ಞಾವಿಧಿಯನ್ನ ಬೋಧಿಸಲಾಯಿತು ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳಾ ದ ಅನುಪಮಾ ಸುಪ್ರಿಯಾ ಹಾಗೂ ಸ್ವೀಪ್ ತಂಡದವರು ಮತ್ತು ಶುಭಂ ಹೋಟಲ್ ಮಾಲೀಕರು ಮತ್ತು ಕಾರ್ಮಿಕರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಶುಭಂ ಹೋಟೆಲ್ ನ ಮಾಲೀಕರಾದ ಉದಯ್ ಕುಮಾರ್ ಮಾತನಾಡಿ ಮೇ 07 ಎಲೆಕ್ಷನ್ ದಿನ 12 ಗಂಟೆ ಮುಂಚಿತವಾಗಿ ಮತದಾನ ಮಾಡಿ ಬಂದವರಿಗೆ ನಮ್ಮ ಹೋಟೆಲ್ ನಲ್ಲಿ ಬೆಳಗ್ಗಿನ ತಿಂಡಿಯನ್ನು ಉಚಿತವಾಗಿ ಕೊಡಲಾಗುವುದು ಎಂದು ತಿಳಿಸಿದರು
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply