ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದೆ, ಲೋಕಸಭಾ ಚುನಾವಣೆಯ ಸ್ಪರ್ಧಿಗಳ ಭವಿಷ್ಯ ಮತ ಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಶಿವಮೊಗ್ಗ ಲೋಕಸಮರಕ್ಕೆ ತೆರೆ ಬಿದ್ದಿದೆ.
ಇಂದು ಬೆಳಗ್ಗೆ 7ರಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಜನರು ಬಿಸಿಲಿನ ನಡುವೆಯೂ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದು,ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಕಳೆದ ಲೋಕಸಭಾ ಚುನಾವಣೆ ಅಂದರೆ 2019ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಶೇ.76.58ರಷ್ಟು ಮತದಾನವಾಗಿತ್ತು .ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೇ ಈ ಭಾರಿ ಹೆಚ್ಚು ಮತದಾನವಾಗಿದೆ. ಒಟ್ಟಾರೆ ಇವತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 78.24 % ರಷ್ಟು ಮತದಾನವಾಗಿದೆ.
ಒಟ್ಟು ಮತದಾನ 78.24,
ಶಿವಮೊಗ್ಗ ಗ್ರಾಮಾಂತರ-83.61%
ಶಿಕಾರಿಪುರ-82.66%
ಸಾಗರ-80.2%,
ಭದ್ರಾವತಿ-71.72%,
ಸೊರಬ-83.27%,
ತೀರ್ಥಹಳ್ಳಿ-82.23%
ಬೈಂದೂರು-76.4%,
ಶಿವಮೊಗ್ಗ-70.33% ಮತದಾನವಾಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರು ಅತಿ ಹೆಚ್ಚು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಮತದಾನದ ಹಬ್ಬದ ಯಶಸ್ಸಿಗೆ ಕಾರಣವಾಗಿದೆ.ಅಂತಿಮ ಹಂತದ ಅಂಕಿ ಅಂಶಗಳ ವರದಿಯಲ್ಲಿ ಈ ಶೇಕಡವಾರು ಮತದಾನದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply