ಶಿವಮೊಗ್ಗ : ನಿನ್ನೆ ಸಂಜೆ 5:30ರ ಸುಮಾರಿಗೆ ಇಡೀ ಶಿವಮೊಗ್ಗ ನಗರವೇ ಬೆಚ್ಚಿ ಬೀಳಿಸುವ ಭಯಾನಕ ಘಟನೆ ಒಂದು ನಡೆದಿತ್ತು. ಎರಡು ಗ್ಯಾಂಗ್ ಗಳ ನಡುವೆ ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾ ಸರ್ಕಲ್ ನಲ್ಲಿ ಇಬ್ಬರೂ ರೌಡಿ ಶೀಟರ್ ಗಳ ನಡುವೆ ಗ್ಯಾಂಗ್ ವಾರ್ ನಡೆದಿತ್ತು. ಘಟನೆಯಲ್ಲಿ ಇಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ನಡುವೆ ನೆನ್ನೆ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿದ್ದ ರೌಡಿಶೀಟರ್ ಯಾಸಿನ್ ಖುರೇಶಿ ಕೂಡ ತಡರಾತ್ರಿ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ
ಸಂಜೆ 5 : 30ರ ಸುಮಾರಿಗೆ ಲಷ್ಕರ್ ಮೊಹಲ್ಲಕ್ಕೆ ಬಂದ ಗ್ಯಾಂಗ್ ಒಂದು ರೌಡಿಶೀಟರ್ ಯಾಸಿನ್ ಕುರೇಶಿ ಮೇಲೆ ಅಟ್ಯಾಕ್ ಮಾಡಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಯಾಸಿನ್ ಕುರೇಶಿ ಗ್ಯಾಂಗ್ ಅಟ್ಯಾಕ್ ಮಾಡಲು ಬಂದವರ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ಎದುರಾಳಿ ಗ್ಯಾಂಗ್ ನ ಕೆಆರ್ ಪುರಂ ನ ನಿವಾಸಿ ಶೋಯೆಬ್ಅಲಿಯಾಸ್ ಖಲಂದರ್ ಅಲಿಯಾಸ್ ಸೇಬು (32) ಮತ್ತು ಅಣ್ಣನಗರ ನಿವಾಸಿ ಮೊಹಮ್ಮದ್ ಗೌಸ್(30) ಎಂಬಾತನನ್ನ ಮಾರಕಾಸ್ತ್ರಗಳಿಂದ ಹೊಡೆದು ತಲೆಯ ಮೇಲೆ ಕಲ್ಲುಗಳನ ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ನಡುವೆ ಅಟ್ಯಾಕ್ ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯಾಸಿನ್ ಖುರೇಶಿ ದಾಳಿಗೆ ಬಂದಿದ್ದವರ ಕೈಯಿಂದ ತಪ್ಪಿಸಿಕೊಂಡು ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದನು. ನಗರದ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರೌಡಿಶೀಟರ್ ಯಾಸಿನ್ ಖುರೇಶಿ ತಡರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಆದಿಲ್ ಹಾಗೂ ಯಾಸಿನ್ ಗ್ಯಾಂಗ್ ಗಳ ನಡುವೆ ಭಯಾನಕ ಜಗಳ ನಡೆದಿದೆ ಎಂದು ಎನ್ನಲಾಗಿದ್ದು, ಕಳೆದ ಮೂರು ದಿನಗಳಿಂದ ಈ ಗ್ಯಾಂಗ್ ನಡುವೆ ಕಿರಿಕ್ ಜೋರಾಗಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಮಾದಕ ವಸ್ತುಗಳ ವಾಸನೆಯೂ ಇರುವ ಕಾರಣ ಈ ಪ್ರಕರಣ ಪೊಲೀಸರಿಗೆ ಗಂಭೀರವಾಗಿ ಪರಿಣಮಿಸಿದೆ,
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply